- Advertisement -
- Advertisement -
ಉಡುಪಿ: ಬಸ್ ಸಮಯದ (ಟೈಮಿಂಗ್ಸ್) ವಿಚಾರವಾಗಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸುತ್ತಿದ್ದ ಇಬ್ಬರು ಖಾಸಗಿ ಬಸ್ ಕಂಡಕ್ಟರ್‌ಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಂಚರಿಸುವ ಜಾಗಕ್ಕೆ ಅಡ್ಡಲಾಗಿ ಬಸ್ ನಿಲ್ಲಿಸಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಾ ಜಗಳವಾಡುತ್ತಿದ್ದ ‘ನವದುರ್ಗಾ’ ಬಸ್‌ನ ಕಂಡಕ್ಟರ್ ಮೊಹಮ್ಮದ್ ಮುಝಮ್ಮಿಲ್ (21) ಹಾಗೂ ‘ಶ್ರೀ ದುರ್ಗಾಂಬ’ ಬಸ್‌ನ ಕಂಡಕ್ಟರ್ ಅಬ್ದುಲ್ ಹಮೀದ್ (50) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದೆ ಇಬ್ಬರೂ ಕೈ-ಕೈ ಮಿಲಾಯಿಸಿದಾಗ, ತಕ್ಷಣವೇ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 194(2) ರಡಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


