Tuesday, September 22, 2026
Homeಕರಾವಳಿಮಂಗಳೂರುಮಂಗಳೂರು: ಡೇಟಾ ಎಂಟ್ರಿ ಕೆಲಸದ ಆಮಿಷವೊಡ್ಡಿ ಯುವತಿಗೆ 9.33 ಲಕ್ಷ ರೂ. ಸೈಬರ್ ವಂಚನೆ

ಮಂಗಳೂರು: ಡೇಟಾ ಎಂಟ್ರಿ ಕೆಲಸದ ಆಮಿಷವೊಡ್ಡಿ ಯುವತಿಗೆ 9.33 ಲಕ್ಷ ರೂ. ಸೈಬರ್ ವಂಚನೆ

- Advertisement -
- Advertisement -

ಮಂಗಳೂರು: ವರ್ಕ್ ಫ್ರಮ್ ಹೋಮ್ ಡೇಟಾ ಎಂಟ್ರಿ ಕೆಲಸ ನೀಡುವುದಾಗಿ ನಂಬಿಸಿ ಯುವತಿಯೊಬ್ಬರಿಂದ 9.33 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 11ರಂದು ದೂರುದಾರೆ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ವಾಟ್ಸಾಪ್/ಮೆಸೇಜ್ ಬಂದಿದ್ದು, ತಾನು ಕಂಪನಿಯೊಂದರ ಎಚ್‌ಆರ್ ಮೇಘಾ ಎಂದು ಅಪರಿಚಿತ ವ್ಯಕ್ತಿ ಪರಿಚಯಿಸಿಕೊಂಡಿದ್ದಳು. ದಿನಕ್ಕೆ 20 ಟಾಸ್ಕ್ ಪೂರ್ಣಗೊಳಿಸಿದರೆ 200 ರೂ. ನೀಡುವುದಾಗಿ ನಂಬಿಸಿ ಲಿಂಕ್ ಕಳುಹಿಸಲಾಗಿತ್ತು. ಮೊದಲ ದಿನ ಹಣ ನೀಡಿದ ವಂಚಕರು, ನಂತರದ ದಿನಗಳಲ್ಲಿ ಟಾಸ್ಕ್ ಪೂರ್ಣಗೊಳಿಸುವ ನೆಪದಲ್ಲಿ ಸೆ.12ರಿಂದ 17ರ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು 9,33,866 ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ತಾನು ಮೋಸ ಹೋಗಿರುವುದು ಅರಿವಿಗೆ ಬಂದ ಯುವತಿ ಪೊಲೀಸರ ಮೆಟ್ಟಿಲೇರಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

- Advertisement -

Latest News

error: Content is protected !!