Monday, September 21, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಗಣೇಶ ವಿಸರ್ಜನೆ ವೇಳೆ ‘ವಂದೇ ಮಾತರಂ’ ಹಾಡು ತಡೆದ ಎಸ್‌ಐ – ಭಕ್ತರ ಆಕ್ರೋಶ,...

ಉಪ್ಪಿನಂಗಡಿ: ಗಣೇಶ ವಿಸರ್ಜನೆ ವೇಳೆ ‘ವಂದೇ ಮಾತರಂ’ ಹಾಡು ತಡೆದ ಎಸ್‌ಐ – ಭಕ್ತರ ಆಕ್ರೋಶ, ಕೆಲಕಾಲ ಉದ್ವಿಗ್ನ ವಾತಾವರಣ

- Advertisement -
- Advertisement -

ಉಪ್ಪಿನಂಗಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 50ನೇ ವರ್ಷದ ಸ್ವರ್ಣ ಮಹೋತ್ಸವ ಗಣೇಶೋತ್ಸವದ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ‘ವಂದೇ ಮಾತರಂ’ ಗಾಯನ ತಡೆದ ಘಟನೆಗೆ ಸಂಬಂಧಿಸಿದಂತೆ ಕೆಲಕಾಲ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಗಣಪತಿ ಮೂರ್ತಿಯನ್ನು ಜಲಸ್ತಂಭನಗೊಳಿಸುವ ಮೊದಲು ಧ್ವನಿವರ್ಧಕದಲ್ಲಿ ‘ವಂದೇ ಮಾತರಂ’ ಗೀತೆಯ ಧ್ವನಿಮುದ್ರಣವನ್ನು ಬಿತ್ತರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಉಪ್ಪಿನಂಗಡಿ ಉಪನಿರೀಕ್ಷಕ (ಎಸ್‌ಐ) ಸುತೇಶ್ ಅವರು, ಗಾಯನವನ್ನು ಎರಡೇ ಚರಣಗಳಿಗೆ ನಿಲ್ಲಿಸುವಂತೆ ಸೂಚಿಸಿದರು ಎನ್ನಲಾಗಿದೆ. ಇದರಿಂದ ಕ್ಷಣಾರ್ಧದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿದ್ದ ಭಕ್ತಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಬಿತ್ತರಿಸಲೇಬೇಕೆಂದು ಪಟ್ಟು ಹಿಡಿದ ಭಕ್ತರು ಎಸ್‌ಐ ವಿರುದ್ಧ ಅಸಮಾಧಾನ ಹೊರಹಾಕಿದರು. ಸ್ಥಳದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿ ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅರಿತ ಎಸ್‌ಐ, ತಕ್ಷಣವೇ ಪೂರ್ಣ ಗೀತೆಯ ಗಾಯನಕ್ಕೆ ಅನುಮತಿ ನೀಡಿದರು.ಬಳಿಕ ವಂದೇ ಮಾತರಂ ಗೀತೆ ಸಂಪೂರ್ಣವಾಗಿ ಪೂರ್ಣಗೊಂಡ ನಂತರ, ಗಣಪತಿ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

- Advertisement -

Latest News

error: Content is protected !!