Saturday, September 19, 2026
Homeಮನರಂಜನೆಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡ ಬಾಲಿವುಡ್ ಜೋಡಿ ದೀಪಿಕಾ-ರಣವೀರ್ ಸಿಂಗ್

ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡ ಬಾಲಿವುಡ್ ಜೋಡಿ ದೀಪಿಕಾ-ರಣವೀರ್ ಸಿಂಗ್

- Advertisement -
- Advertisement -

ಮುಂಬೈ: ಬಾಲಿವುಡ್‌ನ ಖ್ಯಾತ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗುವನ್ನು ಜಗತ್ತಿಗೆ ಬರಮಾಡಿಕೊಂಡಿದ್ದಾರೆ. ಶನಿವಾರ (ಸೆ.19) ನಟಿ ದೀಪಿಕಾ ಪಡುಕೋಣೆ ಅವರು ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ ಮೂಲಕ ಹಂಚಿಕೊಂಡಿರುವ ದಂಪತಿ, ಮಗುವಿನ ಪುಟ್ಟ ಪಾದದ ಗುರುತಿರುವ ಚಿತ್ರದೊಂದಿಗೆ “ವೆಲ್ಕಮ್ ಬೇಬಿ ಗರ್ಲ್” ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗೆ ಈಗಾಗಲೇ ದುವಾ ಪಡುಕೋಣೆ ಸಿಂಗ್ ಎಂಬ ಮಗಳಿದ್ದು, ಇದೀಗ ಎರಡನೇ ಮಗುವಿನ ಆಗಮನದಿಂದ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ನವಜಾತ ಶಿಶು ಹಾಗೂ ದಂಪತಿಗೆ ಚಿತ್ರರಂಗದ ಪ್ರಮುಖರು ಮತ್ತು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

- Advertisement -

Latest News

error: Content is protected !!