Tuesday, September 15, 2026
Homeಕರಾವಳಿಮಂಗಳೂರುಇನ್‌ಸ್ಟಾಗ್ರಾಂ ಬ್ಲ್ಯಾಕ್‌ಮೇಲ್: ಮಾರ್ಫಿಂಗ್ ಬೆದರಿಕೆಗೆ ಹೆದರಿ 5.24 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ಯುವಕ!

ಇನ್‌ಸ್ಟಾಗ್ರಾಂ ಬ್ಲ್ಯಾಕ್‌ಮೇಲ್: ಮಾರ್ಫಿಂಗ್ ಬೆದರಿಕೆಗೆ ಹೆದರಿ 5.24 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ಯುವಕ!

- Advertisement -
- Advertisement -

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವಕನ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ, ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗೆ ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ದೋಚಿರುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಲ್ಯಾಕ್‌ಮೇಲ್‌ಗೆ ಹೆದರಿದ 19 ವರ್ಷದ ಯುವಕ ಹಂತ ಹಂತವಾಗಿ ಒಟ್ಟು 5,24,712 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸಂತ್ರಸ್ತ ಯುವಕ ಇನ್‌ಸ್ಟಾಗ್ರಾಂ ಬಳಸುತ್ತಿದ್ದ ವೇಳೆ ಜಮ್‌ಶೇದ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕಮೆಂಟ್ ಬಾಕ್ಸ್‌ನಲ್ಲಿ ಮೊಬೈಲ್ ಸಂಖ್ಯೆ ನೀಡಿ ವಾಟ್ಸಾಪ್‌ನಲ್ಲಿ ಚಾಟ್ ಮಾಡುವಂತೆ ಕೋರಿದ್ದ. ಅದರಂತೆ ಜೂನ್ 19, 2026 ರಿಂದ ವಾಟ್ಸಾಪ್ ಚಾಟ್ ಆರಂಭಿಸಿದ ಆರೋಪಿ, ಮೊದಲು 300 ರೂಪಾಯಿ ಕಳುಹಿಸುವಂತೆ ಕೇಳಿದ್ದಾನೆ. ಯುವಕ ನಿರಾಕರಿಸಿದರೂ ಪದೇಪದೇ ಕರೆ ಮಾಡಿ ಬೇಡಿಕೊಂಡಾಗ ಕರುಣೆಯಿಂದ 300 ರೂಪಾಯಿ ಫೋನ್ ಪೇ ಮಾಡಿದ್ದಾರೆ.

ಅದಾದ ಬಳಿಕ ಆರೋಪಿಯು ಬೇರೆ ಬೇರೆ ವಾಟ್ಸಾಪ್ ಸಂಖ್ಯೆಗಳಿಂದ ಕರೆ ಮಾಡಿ ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಯುವಕ ಹಣ ನೀಡಲು ನಿರಾಕರಿಸಿದಾಗ, ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫ್ ಮಾಡಿ ವಾಟ್ಸಾಪ್‌ಗೆ ಕಳುಹಿಸಿದ್ದಾನೆ. ಈ ಎಡಿಟೆಡ್ ಫೋಟೋವನ್ನು ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗೆ ಕಳುಹಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

ಹಂತ ಹಂತವಾಗಿ ಹಣ ಪಾವತಿ: ಮಾನಹಾನಿಯ ಭಯಕ್ಕೆ ಬಿದ್ದ ಯುವಕ, ಆರೋಪಿ ಕಳುಹಿಸಿದ ವಿವಿಧ ಸ್ಕ್ಯಾನರ್‌ಗಳಿಗೆ ಜೂನ್ 19 ರಿಂದ ಜುಲೈ 23, 2026 ರವರೆಗೆ ತಮ್ಮ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಫೋನ್ ಪೇ ಮೂಲಕ ಒಟ್ಟು 5,24,712 ಇಂಗ್ಲೀಷ್ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಸರಣಿ ಬ್ಲ್ಯಾಕ್‌ಮೇಲ್‌ನಿಂದ ಕಂಗಾಲಾದ ಯುವಕ ಕೊನೆಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಮಂಗಳೂರು ಸೈಬರ್ ಕ್ರೈಮ್ (CEN) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಣ ಪಡೆದ ಯುಪಿಐ ಐಡಿ ಹಾಗೂ ಬ್ಯಾಂಕ್ ಖಾತೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!