Saturday, September 12, 2026
Homeಕರಾವಳಿಮಂಗಳೂರುಬೆಳ್ತಂಗಡಿ : ದಲಿತ ಕುಟುಂಬದ  ಜಾಗಕ್ಕೆ ಅಕ್ರಮ ಪ್ರವೇಶ ಬೇಲಿ ಕಿತ್ತೆಸೆದು ದಾಂಧಲೆ: ಪ್ರಶ್ನಿಸಿದ ಮಹಿಳೆ...

ಬೆಳ್ತಂಗಡಿ : ದಲಿತ ಕುಟುಂಬದ  ಜಾಗಕ್ಕೆ ಅಕ್ರಮ ಪ್ರವೇಶ ಬೇಲಿ ಕಿತ್ತೆಸೆದು ದಾಂಧಲೆ: ಪ್ರಶ್ನಿಸಿದ ಮಹಿಳೆ ಮುಂದೆ ಬಟ್ಟೆ ಎತ್ತಿ ಮರ್ಮಾಂಗ ಪ್ರದರ್ಶಿಸಿದ ಆರೋಪಿ‌ ಬಂಧನ‌

- Advertisement -
- Advertisement -

ಬೆಳ್ತಂಗಡಿ : ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿದ ವ್ಯಕ್ತಿಯೋರ್ವ ಕೃತ್ಯವನ್ನು ಆಕ್ಷೇಪಿಸಿದ ದಲಿತ ಕುಟುಂಬಗಳ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ನಡೆದಿದ್ದು. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಡ್ಯಾಡಿ ನಿವಾಸಿ ಹನೀಫ್(60) ಎಂಬಾತನೇ ಬಂಧಿತ ಆರೋಪಿಯಾಗಿದ್ದು ಆರೋಪಿಯನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ‌ ವಿಧಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ  ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ವಾಸ್ತವ್ಯವಿದ್ದು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ದಲಿತ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಸಿಮೆಂಟ್ ಕಂಬದ ತಂತಿ ಬೇಲಿ  ಹಾಕಿಕೊಂಡು ಸ್ವಾಧೀನದಲ್ಲಿದ್ದ ಜಾಗಕ್ಕೆ ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಅಕ್ರಮ ಪ್ರವೇಶಿಸಿ ಜಾತಿನಿಂದನೆಗೈದು ಅವಾಚ್ಯವಾಗಿ ಅಶ್ಲೀಲ ಪದಗಳೊಂದಿಗೆ ನಿಂದಿಸಿದ್ದಲ್ಲದೆ ಸಿಮೆಂಟ್ ಕಂಬದ ತಂತಿ ಬೇಲಿಯನ್ನು ಕಿತ್ತೆಸೆದು

ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಅಕ್ರಮವಾಗಿ ಪ್ರವೇಶಿಸಿ ಬೇಲಿ ಹಾನಿ ಮಾಡುತ್ತಿರುವುದನ್ನು ತಮ್ಮ ಜಾಗದಲ್ಲಿ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯೊಬ್ಬರು ಪ್ರಶ್ನಿಸಿದ್ದು  ಘಟನಾವಳಿಯನ್ನು ತಮ್ಮ ಮೊಬೈಲ್ ಗಳಲ್ಲಿ ವೀಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ಹನೀಫ್ ಎಂಬಾತ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆ ಬಟ್ಟೆಯನ್ನು ಎತ್ತಿ ತನ್ನ ಒಳ ಉಡುಪನ್ನು ಜಾರಿಸಿ ತನ್ನ ಖಾಸಗಿ ಅಂಗವನ್ನು  ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದು ಜಾಗವನ್ನು ಬಿಟ್ಟು ಹೋಗದಿದ್ದರೆ ನಿಮ್ಮನ್ನು ಮಾನಭಂಗ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ  ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈತನ ವಿಕೃತಿಯಿಂದ ಭಯಗೊಂಡ  ದಲಿತ ಕುಟುಂಬ ಸ್ಥಳೀಯ ದಲಿತ ಮುಖಂಡರೊಂದಿಗೆ ವೇಣೂರು ಪೋಲಿಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣ ದೃಶ್ಯಾವಳಿಯ ಸಾಕ್ಷಾಧಾರಗಳ ಸಹಿತ ಸೆ.8 ರಂದು ದೂರು ನೀಡಿದ್ದರು.

ಅದರಂತೆ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ ಎಸ್ 329(3), 352,351(2),75(1), 324(4) ರಂತೆ ಪ್ರಕರಣ ದಾಖಲಿಸಲಾಗಿ ವೇಣೂರು ಪೊಲೀಸರು ಆರೋಪಿಯನ್ನು ಸೆ.8 ರಂದು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!