Tuesday, September 8, 2026
Homeಆರಾಧನಾಕರಾವಳಿಯಲ್ಲೆಡೆ ಮೊಂತಿ ಫೆಸ್ಟ್ ಹಬ್ಬದ ಸಂಭ್ರಮ

ಕರಾವಳಿಯಲ್ಲೆಡೆ ಮೊಂತಿ ಫೆಸ್ಟ್ ಹಬ್ಬದ ಸಂಭ್ರಮ

- Advertisement -
- Advertisement -

ಮಂಗಳೂರು: ಕ್ರಿಶ್ಚಿಯನ್ ಬಾಂಧವರು ಮಂಗಳವಾರದಂದು ಕನ್ಯಾಮರಿಯಮ್ಮನವರ ಜನ್ಮದಿನವಾದ ‘ಮೊಂತಿ ಫೆಸ್ಟ್’ ಅನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಮಂಗಳೂರಿನ ರೊಸಾರಿಯೊ, ಬೋಂದೆಲ್, ಮತ್ತು ಉರ್ವಾ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಬೆಳಗಿನ ಜಾವ ವಿಶೇಷ ಬಲಿಪೂಜೆ ನೆರವೇರಿತು. ಈ ವೇಳೆ ನವಧಾನ್ಯದ ಹೊಸ ತೆನೆಗಳನ್ನು ಆಶೀರ್ವಚನ ನಡೆಸಿ ಭಕ್ತಿಪೂರ್ವಕ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಭಕ್ತರು ಬಾಲ್ಯ ಮರಿಯಮ್ಮನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಿದರೆ, ಧರ್ಮಗುರುಗಳು ಹಬ್ಬದ ವಿಶೇಷ ಸಂದೇಶ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಾಗೂ ಕಬ್ಬನ್ನು ವಿತರಿಸಿದರು.

ಚರ್ಚ್‌ಗಳ ಆಚರಣೆಯ ನಂತರ ಕುಟುಂಬಸ್ಥರೆಲ್ಲರೂ ಮನೆಗಳಲ್ಲಿ ಒಂದೆಡೆ ಸೇರಿ ಸ್ಥಳೀಯವಾಗಿ ಬೆಳೆದ ತರಕಾರಿಗಳ ಪಲ್ಯ, ಸಾರು ಮತ್ತು ಸಿಹಿ ಪಾಯಸದಿಂದ ಕೂಡಿದ ಸಾಂಪ್ರದಾಯಿಕ ಸಸ್ಯಾಹಾರಿ ಭೋಜನವನ್ನು ಸವಿಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

- Advertisement -

Latest News

error: Content is protected !!