Friday, September 4, 2026
Homeಕರಾವಳಿಮಂಗಳೂರುಬಂಟ್ವಾಳ; ಸ್ಕೂಟರ್ ತಡೆಗೋಡೆಗೆ ಡಿಕ್ಕಿ: ಶಾಲಾ ಉಪಪ್ರಾಂಶುಪಾಲ ಅನಿಲ್ ಎಸ್. ನಾಯಕ್ ದುರ್ಮರಣ

ಬಂಟ್ವಾಳ; ಸ್ಕೂಟರ್ ತಡೆಗೋಡೆಗೆ ಡಿಕ್ಕಿ: ಶಾಲಾ ಉಪಪ್ರಾಂಶುಪಾಲ ಅನಿಲ್ ಎಸ್. ನಾಯಕ್ ದುರ್ಮರಣ

- Advertisement -
- Advertisement -

ಬಂಟ್ವಾಳ: ಇಲ್ಲಿನ ರಾಮಲ್‌ಕಟ್ಟೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಡೈಮಂಡ್ ಶಾಲೆಯ ವೈಸ್ ಪ್ರಿನ್ಸಿಪಾಲ್ ಅನಿಲ್ ಎಸ್. ನಾಯಕ್ (72) ದಾರುಣವಾಗಿ ಮೃತಪಟ್ಟಿದ್ದಾರೆ.

ಅನಿಲ್ ಅವರು ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!