Thursday, September 3, 2026
Homeತಾಜಾ ಸುದ್ದಿನಟ 'ದುನಿಯಾ' ವಿಜಯ್ - ನಾಗರತ್ನ ದಾಂಪತ್ಯಕ್ಕೆ ಅಂತ್ಯ: ಹೈಕೋರ್ಟ್‌ನಿಂದ ವಿಚ್ಛೇದನ ಮಂಜೂರು!

ನಟ ‘ದುನಿಯಾ’ ವಿಜಯ್ – ನಾಗರತ್ನ ದಾಂಪತ್ಯಕ್ಕೆ ಅಂತ್ಯ: ಹೈಕೋರ್ಟ್‌ನಿಂದ ವಿಚ್ಛೇದನ ಮಂಜೂರು!

- Advertisement -
- Advertisement -

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ‘ದುನಿಯಾ’ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದೀರ್ಘಕಾಲದ ಸಾಂಸಾರಿಕ ಕಾನೂನು ಸಮರಕ್ಕೆ ಕೊನೆಗೂ ತೆರೆಬಿದ್ದಿದೆ. ದಂಪತಿಗೆ ಕಾನೂನಾತ್ಮಕವಾಗಿ ವಿಚ್ಛೇದನ ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್, ದಾಂಪತ್ಯ ಜೀವನವನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.

ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದ ಅಂಗಳದಲ್ಲಿದ್ದ ಈ ವಿಚ್ಛೇದನ ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂಪಾಯಿ ಕಾಯಂ ಜೀವನಾಂಶ ನೀಡುವಂತೆ ವಿಜಯ್ ಅವರಿಗೆ ಆದೇಶಿಸಿ ಇತ್ಯರ್ಥಪಡಿಸಿದೆ.

ಕುಟುಂಬ ನ್ಯಾಯಾಲಯದಲ್ಲಿ ಆರಂಭವಾಗಿದ್ದ ಈ ವಿವಾದ, ಬಳಿಕ ಹೈಕೋರ್ಟ್ ಮೆಟ್ಟಿಲೇರಿ ಸುದೀರ್ಘ ವಿಚಾರಣೆ ನಡೆದಿತ್ತು. ಪ್ರಸ್ತುತ ನೀಡಲಾಗಿರುವ 2 ಕೋಟಿ ರೂ. ಜೀವನಾಂಶದ ಜೊತೆಗೆ, ಮಕ್ಕಳು ಮತ್ತು ನಾಗರತ್ನ ಅವರ ಮುಂದಿನ ಜೀವನ ನಿರ್ವಹಣೆಗೆ ಸಂಬಂಧಿಸಿದ ಕೆಲ ಕಟ್ಟುನಿಟ್ಟಿನ ಷರತ್ತುಗಳನ್ನು ನ್ಯಾಯಾಲಯ ವಿದಿಸಿದೆ. ಈ ತೀರ್ಪಿನೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಸುದೀರ್ಘ ಕಾಲ ಸುದ್ದಿಯಲ್ಲಿದ್ದ ನಟ ದುನಿಯಾ ವಿಜಯ್ ಅವರ ಕುಟುಂಬದ ಕಾನೂನಾತ್ಮಕ ವಿವಾದಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.

- Advertisement -

Latest News

error: Content is protected !!