Tuesday, September 1, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವದ ಅಂಗವಾಗಿ...

ಬೆಳ್ತಂಗಡಿ : ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವದ ಅಂಗವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ :ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವ ದ ಸಲುವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ  ಕಾರ್ಯಕ್ರಮ ಆ 30 ರಂದು ನೆರವೇರಿತು.

ದೇವರಿಗೆ ದೀಪ ಬೆಳಗಿಸುವುರ ಮೂಲಕ ಪ್ರಾರಂಬಿಸಲಾಯಿತು. ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿದರು. ಅಂಚೆ ವಿಭಾಗ ಪುತ್ತೂರು ಇದರ ಉಪ ಅಧೀಕ್ಷರಾದ ಶ್ರೀ ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ನೂರಾರು ಮಂದಿ ಹೊಸ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ  ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀ ಪ್ರಶಾಂತ್ ನಿರುoಬುಡ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಆಚಾರ್ಯ, ಊರ ಹಿರಿಯರಾದ  ಶ್ರೀಪತಿ ರಾವ್, ರಘುಪತಿ ಭಟ್,ಶಾಲಾ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ಎನ್. ಸಹ ಶಿಕ್ಷಕರು, ಎಸ್. ಡಿ. ಎಂ. ಸಿ, ಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!