Saturday, August 22, 2026
Homeತಾಜಾ ಸುದ್ದಿಮಂಗಳೂರು ರೈಲ್ವೇ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ವಿರೋಧ

ಮಂಗಳೂರು ರೈಲ್ವೇ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ವಿರೋಧ

- Advertisement -
- Advertisement -

ಮಂಗಳೂರು: ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಮಾಡುವುದಕ್ಕೆ ಕೇರಳಂ ನಿಂದ ವಿರೋಧ ವ್ಯಕ್ತವಾಗಿದೆ.

ರೈಲ್ವೇ ಮಂಡಳಿಯ ನಿರ್ಧಾರವನ್ನು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ ವಿರೋಧಿಸಿರುವ ಕೇರಳಂ ಸಿಎಂ ವಿ.ಡಿ. ಸತೀಸನ್, ಮಂಗಳೂರು ಜಂಕ್ಷನ್‌ ಅನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ನೈಋತ್ಯ ರೈಲ್ವೇಗೆ ವಿಲೀನಗೊಳಿಸುವ ಏಕಪಕ್ಷೀಯ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಇದರಿಂದ ದಕ್ಷಿಣ ರೈಲ್ವೇ ಮತ್ತು ಕೇರಳದ ಆದಾಯ ಹಾಗೂ ಅಭಿವೃದ್ಧಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಪೋಸ್ಟ್ ಮಾಡಿರುವ ಕೇರಳಂ ಮುಖ್ಯಮಂತ್ರಿ ಸತೀಸನ್, ಈ ವಿಷಯವನ್ನು ಪ್ರಧಾನಮಂತ್ರಿ ಹಾಗೂ ರೈಲ್ವೇ ಸಚಿವರೊಂದಿಗೆ ತುರ್ತಾಗಿ ಪ್ರಸ್ತಾಪಿಸಲಿದ್ದೇವೆ ಎಂದು ಹೇಳಿದ್ದಾರೆ.

ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರೈಲ್ವೇ ಮಂಡಳಿ ಮಂಗಳೂರು ರೈಲ್ವೇ ಪ್ರದೇಶವನ್ನು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆಗೊಳಿಸಿ ನಿನ್ನೆ ಅಧಿಸೂಚನೆ ಹೊರಡಿಸಿತ್ತು.

- Advertisement -

Latest News

error: Content is protected !!