Wednesday, August 19, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ: ಎರಡು ಟಿಪ್ಪರ್‌ಗಳ ಸಹಿತ ಆರೋಪಿ ಬಂಧನ

ಬೆಳ್ತಂಗಡಿ : ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ: ಎರಡು ಟಿಪ್ಪರ್‌ಗಳ ಸಹಿತ ಆರೋಪಿ ಬಂಧನ

- Advertisement -
- Advertisement -

ಬೆಳ್ತಂಗಡಿ: ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ (ಕಾ&ಸು) ಆನಂದ ಎಂ. ಅವರು ಸಿಬ್ಬಂದಿಯೊಂದಿಗೆ ಆ.18ರಂದು ಬೆಳಗಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ ಬೊಳ್ಳೂರುಬೈಲು ಪ್ರದೇಶದ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಮಾರಾಟ ಮಾಡಲು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬೆಳಗ್ಗೆ 4.45ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ತೆರಳಿದಾಗ, ನದಿ ಕಿನಾರೆಯಲ್ಲಿ ಆರು ಮಂದಿ ಪ್ಲಾಸ್ಟಿಕ್ ಬುಟ್ಟಿಗಳ ಮೂಲಕ ಮರಳನ್ನು ಟಿಪ್ಪರ್ ಲಾರಿಗೆ ತುಂಬಿಸುತ್ತಿರುವುದು ಕಂಡುಬಂದಿದೆ. ಪೊಲೀಸರನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸಿಬ್ಬಂದಿ ಬೆನ್ನಟ್ಟಿ ಓರ್ವ ಆರೋಪಿ ಮಹಮ್ಮದ್ ಸುಹೈಲ್ ಎಂಬಾತನನ್ನು ಹಿಡಿದು ವಿಚಾರಣೆ ವೇಳೆ ಪರಾರಿಯಾದ KA-18-B-1236 ಟಿಪ್ಪರ್‌ನ ಚಾಲಕನ ಹೆಸರು ಇಬ್ರಾಹಿಂ ಹಾಗೂ ಮರಳು ತುಂಬುತ್ತಿದ್ದವರ ಪೈಕಿ ಪುನೀತ್ ಎಂಬಾತನ ಹೆಸರನ್ನು ಆರೋಪಿ ತಿಳಿಸಿದ್ದಾನೆ. ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯಾವುದೇ ಸರಕಾರಿ ಪರವಾನಗಿ ಇಲ್ಲವೆಂಬುದನ್ನೂ ಆತ ಒಪ್ಪಿಕೊಂಡಿದ್ದಾನೆ.

ಪಂಚರ ಸಮಕ್ಷಮ ಪೊಲೀಸರು ಪರಿಶೀಲನೆ ನಡೆಸಿದಾಗ KA-19-AA-2826 ಸಂಖ್ಯೆಯ ಟಿಪ್ಪರ್‌ನಲ್ಲಿ ಸಂಪೂರ್ಣವಾಗಿ ಮರಳು ತುಂಬಿದ್ದು, ಅದರ ಅಂದಾಜು ಮೌಲ್ಯ 10,000 ಹಾಗೂ ಟಿಪ್ಪರ್‌ನ ಅಂದಾಜು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ. ಮತ್ತೊಂದು KA-18-B-1236 ಟಿಪ್ಪರ್‌ನಲ್ಲಿ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಗಳಷ್ಟು ಮರಳು ಪತ್ತೆಯಾಗಿದ್ದು, ಮರಳಿನ ಅಂದಾಜು ಮೌಲ್ಯ 400 ಹಾಗೂ ಟಿಪ್ಪರ್‌ನ ಅಂದಾಜು ಮೌಲ್ಯ 4 ಲಕ್ಷ ಎಂದು ತಿಳಿದುಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಬಂಟ್ವಾಳದ ಮಹಮ್ಮದ್ ಸುಹೈಲ್,ಬಂಟ್ವಾಳದ ಇಬ್ರಾಹಿಂ, ಇಂದಬೆಟ್ಟು ಗ್ರಾಮದ ನೇತ್ರಾವತಿನಗರದ ಪುನೀತ್ ಹಾಗೂ ಇತರರ ವಿರುದ್ಧ ಬಿಎನ್‌ಎಸ್-2023ರ ಕಲಂ 303(2) ಜೊತೆಗೆ 3(5), MMDR Actನ ಕಲಂ 4(1), 4(1A), 21(1)(1A) ಹಾಗೂ KMMCR-1994ರ ಕಲಂ 42, 43, 44ರ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!