Thursday, August 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಜನರ ನೋವುಗಳಿಗೆ ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಸಚಿವ ಯುಟಿ ಖಾದರ್ ಕರೆ

ಬೆಳ್ತಂಗಡಿ : ಜನರ ನೋವುಗಳಿಗೆ ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಸಚಿವ ಯುಟಿ ಖಾದರ್ ಕರೆ

- Advertisement -
- Advertisement -

ಬೆಳ್ತಂಗಡಿ : ಸರಕಾರಿ ಅಧಿಕಾರಿಗಳು ಬುದ್ಧಿವಂತಿಕೆಯ ಜತೆ ಹೃದಯವಂತಿಕೆ ತೋರಿ ಪ್ರಜ್ಞಾವಂತರಾಗಿ ಕೆಲಸ ಮಾಡಿ .ಜನರ ನೋವಿನ ಸಂದರ್ಭ ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು. ಅವರು ಆ.5 ರಂದು ಬುಧವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಮಳೆಹಾನಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳಲ್ಲಿ ಮಳೆ ಹಾನಿ ಉಂಟಾಗಿದ್ದು ಒಂದು ವಾರ ಕಳೆದರು ತುರ್ತು ಪರಿಹಾರ ಯಾಕೆ ನೀಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಪರಿಹಾರ ನೀಡುವಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರಕಾರದ ಬಳಿ ಅನುದಾನಗಳನ್ನು ನೀಡಲು ಹಣದ ಕೊರತೆ ಇಲ್ಲ. ಈಗಾಗಲೇ ಮಳೆಹಾನಿ ಪರಿಹಾರಕ್ಕೆ ತಹಸೀಲ್ದಾರ್ ಖಾತೆಗೆ ಒಂದು ಕೋಟಿ ರೂ. ಮಾಡಲಾಗಿದೆ. ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವುದು ಅತಿ ಅಗತ್ಯ ಎಂದು ಹೇಳಿದರು.


ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಕೆಡಿಪಿ ಸಭೆ ನಡೆಯದಿರುವ ಕುರಿತು ಕೆಡಿಪಿ ಸದಸ್ಯರುಗಳು ಸಭೆಯ ಗಮನ ಸೆಳೆದರು ಯಾವ ಕಾರಣಕ್ಕಾಗಿ ಕೆ.ಡಿ.ಪಿ ಸಭೆ ನಡೆಯುತ್ತಿಲ್ಲ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರನ್ನು ಪ್ರಶ್ನಿಸಿದ ಸಚಿವರು ಈ ತಿಂಗಳಿನಿಂದ‌ ಸಮರ್ಪಕವಾಗಿ ಕೆಡಿಪಿ ಸಭೆ ನಡೆಯಬೇಕು ಎಂದು ಸೂಚಿಸಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು ಮಾತನಾಡಿ ಮುಂದಿನ ತಿಂಗಳು ಸಚಿವರೇ ಭಾಗವಹಿಸಿ ಕೆಡಿಪಿ ಸಭೆಯನ್ನು ನಡೆಸಿ ಎಂದು ಸಲಹೆ ನೀಡಿದರು.

ಉಪ್ಪಿನಂಗಡಿ ಕುಪ್ಪೆಟ್ಟಿ ರಸ್ತೆಯ ದುರವಸ್ತೆಯ ಬಗ್ಗೆ ಗಮನ ಸೆಳೆದಾಗ ಅನುದಾನ‌ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದಾಗ ಮಳೆಗಾಲಕ್ಕೆ ತುರ್ತು ದುರಸ್ತಿ ಕ್ರಮಗಳನ್ನು ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಚಿವರು ಸೂಚಿಸಿದರು. ಈಗಾಗಲೇ ಲೋಕೋಪಯೋಗಿ ಇಲಾಖೆಗೆ ರಾಜ್ಯ ಹೆದ್ದಾರಿಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲಾಗಿದೆ ಕೂಡಲೇ ಅಗತ್ಯ ಕಾರ್ಯಗಳನ್ನು ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ರಸ್ತೆಗಳಿಗೆ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡುವಂತೆ ಸಚಿವರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮುಂಡಾಜೆಯಲ್ಲಿ ಹೆದ್ದಾರಿ ಕಾಮಗಾರಿಯ ಅವ್ಯಸ್ಥೆಯಿಂದ ಪ್ರವಾಹ ಸಂಭವಿಸಿದ್ದು ಹಲವು ಮನೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ ಎಂದಾಗ ಅಧಿಕಾರಿಗಳು ಈ‌ಬಗ್ಗೆ ಪರಿಶೀಲಿಸಲಾಗಿದ್ದು ಅದನ್ನು ಸರಿಪಡಿಸುವ ಭರವಸೆ ನೀಡಿದರು. ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಲ್ ಅವೈಜ್ಞಾನಿಕವಾಗಿದ್ದು ಈಗಾಗಲೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿಯವರು ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು ಸೂಚಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಸಮಸ್ಯೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ದರ್ಶನ್ ಕೆ‌.ವಿ. ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವಾರ ಭಾರಿ ಮಳೆ ಬಂದಿದ್ದರು ವಾಡಿಕೆ ಮಳೆಗಿಂತ 26ಶೇ. ಕೊರತೆ ಇದೆ. ಇಲಾಖೆಗಳಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದರೆ ಕೂಡಲೇ ಗಮನಕ್ಕೆ ತನ್ನಿ ಎಂದು ಹೇಳಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್,ಡಿ ಆರ್ ಎಫ್ ಒ ರವಿಶಂಕರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯನ್ ಉಪಸ್ಥಿತರಿದ್ದರು.ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು.

ಕಳೆದ ವರ್ಷದ ಪ್ರಕೃತಿ ವಿಕೋಪ‌ನಿಧಿ ಇನ್ನೂ ಬಳಕೆಯಾಗಿಲ್ಲ ಎಂದು ಗ್ಯಾರಂಟಿ‌ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ ಗಮನ ಸೆಳೆದು ಸರಕಾರದಿಂದ 10 ಕೋಟಿ ಅನುದಾನ ಮಂಜೂರಾಗಿದೆ ಆದರೆ ಇನ್ನೂ ಕಾಮಗಾರಿ ನಡೆದಿಲ್ಲ ಎಂದರು ಪಡಂಗಡಿ ಹಾಗೂ ಮಾಲಾಡಿಯ ಕಿರು ಸೇತುವೆಗಳಿಗೆ ಅನುದಾನ ನಿಗಧಿ ಪಡಿಸಲಾಗಿದೆ ಆದರೆ ಕಾಮಗಾರಿ ಮಾಡಿಲ್ಲ ಇದರಿಂದಾಗಿ ಈ ಪ್ರದೇಶದ ಜನರು ಸಮಸ್ಯೆ ಎಸುರಿಸುವಂತಾಗಿದೆ ಎಂದಾಗ ಈ ಕಾಮಗಾರಿಗಳು ನಿರ್ಮಿತಿ ಕೇಂದ್ರದ ಮೂಲಕ ನಡೆಯಲಿದೆ ಎಂದು ತಾ.ಪಂ‌ ಕಾರ್ಯ ನಿರ್ವಹಣಾಧಿಕಾರಿಯವರು ತಿಳಿಸಿದರು. ಕಾಮಗಾರಿ ಯಾಕೆ‌ ಆರಂಭವಾಗಿಲ್ಲ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

- Advertisement -

Latest News

error: Content is protected !!