Tuesday, August 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಆಸ್ಪತ್ರೆಗೆ ಸಾಗಿಸುವ ವೇಳೆ ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ...

ಬೆಳ್ತಂಗಡಿ : ಆಸ್ಪತ್ರೆಗೆ ಸಾಗಿಸುವ ವೇಳೆ ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ ಮನವಿ

- Advertisement -
- Advertisement -

ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಮಂಜುನಾಥ ಹೋಟೆಲ್ ಬಳಿ ಈ ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಯು ಆ.2 ರಂದು ರಾತ್ರಿ ವೇಳೆ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದನ್ನು ಸಾರ್ವಜನಿಕರು ಗಮನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲು ಆ.3 ರಂದು ಬೆಳಿಗ್ಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯ ವಯಸ್ಸು ಸುಮಾರು 60–65 ವರ್ಷ, ಎತ್ತರ 5.5 ಅಡಿ, ಸಪೂರ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಮುಖದಲ್ಲಿ ಕಪ್ಪು-ಬಿಳಿ ಮಿಶ್ರಿತ ಮೀಸೆ ಇದೆ. ತಲೆಯಲ್ಲಿ ಸುಮಾರು 3.5 ಇಂಚು ಉದ್ದದ ಕಪ್ಪು-ಬಿಳಿ ನೆರೆತ ಕೂದಲು ಇದ್ದು, ಎಡ ಕಣ್ಣಿನ ಕೆಳಭಾಗದಲ್ಲಿ ಹಾಗೂ ಎಡ ತೋಳಿನ ಮೇಲೆ ಕಪ್ಪು ಎಳ್ಳು ಮಚ್ಚೆಗಳಿವೆ.ಮೃತರು ಕೆಂಪು ಬಣ್ಣದ ಜರ್ಕಿನ್, ನೀಲಿ ಚೌಕಳಿ ಲುಂಗಿ ಹಾಗೂ “RUPA Jon” ಎಂದು ಬರೆದಿರುವ ನೀಲಿ ಬಣ್ಣದ ಒಳಚಡ್ಡಿ ಧರಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ಇರುವವರು ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಧರ್ಮಸ್ಥಳ ಪೊಲೀಸರು ಮನವಿ ಮಾಡಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣೆ 08256-277253, PSI ಧರ್ಮಸ್ಥಳ  7795424204 / 8277986449, CPI ಬೆಳ್ತಂಗಡಿ 9480805336, ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ 0824-2220500, ಇ-ಮೇಲ್ [email protected] ಸಂಪರ್ಕಿಸಲು ಕೊರಲಾಗಿದೆ.

- Advertisement -

Latest News

error: Content is protected !!