Wednesday, September 23, 2026
Homeಕರಾವಳಿಸುಳ್ಯ ಕೃಷಿ ತೋಟಗಳ ಮೇಲೆ ಮುಂದುವರಿದ ಕಾಡಾನೆಗಳ ದಾಳಿ; ನೂರಕ್ಕೂ ಹೆಚ್ಚು ಗಿಡಗಳು ನಾಶ

ಸುಳ್ಯ ಕೃಷಿ ತೋಟಗಳ ಮೇಲೆ ಮುಂದುವರಿದ ಕಾಡಾನೆಗಳ ದಾಳಿ; ನೂರಕ್ಕೂ ಹೆಚ್ಚು ಗಿಡಗಳು ನಾಶ

- Advertisement -
- Advertisement -

ಸುಳ್ಯ: ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಬುಧವಾರ ಬಾಜಿನಡ್ಕ ಸಮೀಪದ ಅಜ್ಜಿಕಲ್ಲು ಭಾಗದಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.

ಅಜ್ಜಿಕಲ್ಲಿನ ಚೆನ್ನಕೇಶವ ಗೌಡ ಎಂಬುವವರ ತೋಟಕ್ಕೆ ದಾಳಿ ಇಟ್ಟ ಆನೆಗಳು, ಸುಮಾರು 100 ಬಾಳೆಗಿಡಗಳು, ಎರಡು ತೆಂಗಿನ ದೋಣೆಗಳು ಹಾಗೂ ಇತರೆ ಮರ-ಗಿಡಗಳನ್ನು ತಿಂದು ತುಳಿದು ನಾಶಪಡಿಸಿವೆ. ನಿರಂತರವಾಗಿ ನಡೆಯುತ್ತಿರುವ ಈ ಕಾಡಾನೆಗಳ ದಾಳಿಯಿಂದಾಗಿ ಸ್ಥಳೀಯ ಕೃಷಿಕರು ಕಂಗೆಟ್ಟಿದ್ದು, ಸೂಕ್ತ ಪರಿಹಾರ ಹಾಗೂ ಆನೆಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!