Tuesday, July 28, 2026
Homeಕರಾವಳಿಉಡುಪಿಉಡುಪಿಯಲ್ಲಿ ಜುಲೈ 31ರಿಂದ 'ಸ್ವದೇಶಿ ಖಾದ್ಯ ಮೇಳ'

ಉಡುಪಿಯಲ್ಲಿ ಜುಲೈ 31ರಿಂದ ‘ಸ್ವದೇಶಿ ಖಾದ್ಯ ಮೇಳ’

- Advertisement -
- Advertisement -

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಅಡಿಟೋರಿಯಂನಲ್ಲಿ ಜುಲೈ 31ರಿಂದ ಆಗಸ್ಟ್ 2ರವರೆಗೆ ‘ಸ್ವದೇಶಿ ಖಾದ್ಯ ಮೇಳ’ (ನಮ್ಮನೆಲದ ರುಚಿ ನಮ್ಮವರ ಉತ್ಪನ್ನಗಳು) ನಡೆಯಲಿದೆ ಎಂದು ಸಂಘಟಕ ಹಾಗೂ ಉದ್ಯಮಿ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

ಶಕ್ತಿ ಈವೆಂಟ್ಸ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ ಮೇಳವನ್ನು ಆಗಸ್ಟ್ 1ರಂದು ಬೆಳಿಗ್ಗೆ 10 ಗಂಟೆಗೆ ಊರಿನ ಹಿರಿಯರು ಉದ್ಘಾಟಿಸಲಿದ್ದು, ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಗೃಹ ಉದ್ಯಮಿಗಳು ಹಾಗೂ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಿರುವ ಈ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿರಲಿವೆ.

ಇಲ್ಲಿ 150ಕ್ಕೂ ಅಧಿಕ ಬಗೆಯ ತಿಂಡಿ-ತಿನಸುಗಳ ಪ್ರದರ್ಶನ, ತಯಾರಿ ಮತ್ತು ಮಾರಾಟದ ಜೊತೆಗೆ ಸಾವಯವ ಆಹಾರ, ಕರಕುಶಲ ವಸ್ತುಗಳು, ಖಾದಿ ಬಟ್ಟೆ, ಮಸಾಲೆ ಪದಾರ್ಥಗಳು ಹಾಗೂ ಗೃಹೋಪಯೋಗಿ ಸಾಮಗ್ರಿಗಳು ಲಭ್ಯವಿರಲಿವೆ. ಸಾರ್ವಜನಿಕರಿಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಉಚಿತ ಪ್ರವೇಶವಿರಲಿದೆ.

- Advertisement -

Latest News

error: Content is protected !!