Friday, July 24, 2026
Homeಕರಾವಳಿಮಂಗಳೂರುಮಂಗಳೂರು: 'ಡಿಜಿಟಲ್ ಅರೆಸ್ಟ್' ಜಾಲಕ್ಕೆ ಸಿಲುಕಿ 31 ಲಕ್ಷ ರೂಪಾಯಿ ಕಳೆದುಕೊಂಡ ವೃದ್ಧ

ಮಂಗಳೂರು: ‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಸಿಲುಕಿ 31 ಲಕ್ಷ ರೂಪಾಯಿ ಕಳೆದುಕೊಂಡ ವೃದ್ಧ

- Advertisement -
- Advertisement -

ಮಂಗಳೂರು: ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ 64 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಬೆದರಿಕೆಯೊಡ್ಡಿ ಬರೋಬ್ಬರಿ 31 ಲಕ್ಷ ರೂಪಾಯಿ ಆನ್‌ಲೈನ್ ವಂಚನೆ ಎಸಗಿರುವ ಗಂಭೀರ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜುಲೈ 15 ರಂದು ಸಂತ್ರಸ್ತರಿಗೆ ಕರೆ ಮಾಡಿದ ಅಪರಿಚಿತ ವಂಚಕರು, ತಮನ್ನು ‘ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ’ ಹಾಗೂ ಮುಂಬೈ ಸೈಬರ್ ಸೆಲ್‌ನ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. “ನಿಮ್ಮ ಹೆಸರಿನ ಸಿಮ್ ಕಾರ್ಡ್ ಬಳಸಿ ಅಶ್ಲೀಲ ವೀಡಿಯೊ ರವಾನಿಸಲಾಗಿದ್ದು, ನಿಮ್ಮ ವಿರುದ್ಧ ಎಫ್‌ಐಆರ್ ಹಾಗೂ ವಾರಂಟ್ ಜಾರಿಯಾಗಿದೆ” ಎಂದು ಬೆದರಿಸಿದ್ದರು.

ಬಿಕರಿ/ಖಾತೆ ಪರಿಶೀಲನೆಯ ನೆಪದಲ್ಲಿ ಜುಲೈ 17 ರಂದು ಮೊದಲ ಹಂತವಾಗಿ 3.80 ಲಕ್ಷ ರೂ. ವರ್ಗಾಯಿಸಿಕೊಂಡಿದ್ದ ಆರೋಪಿಗಳು, ಬಳಿಕ ಚಿನ್ನಾಭರಣ ಅಡವಿಡುವಂತೆ ಒತ್ತಡ ಹೇರಿದ್ದರು. ವಂಚಕರ ಮಾತನ್ನು ನಂಬಿದ ವೃದ್ಧರು ಜುಲೈ 20 ರಂದು ಮುತ್ತೂಟ್ ಫೈನಾನ್ಸ್ ನಲ್ಲಿ ಚಿನ್ನ ಅಡವಿಟ್ಟು, ಬಂದ ಹಣದಲ್ಲಿ 27.20 ಲಕ್ಷ ರೂ.ಗಳನ್ನು ವಂಚಕರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ.

ಒಟ್ಟಾರೆಯಾಗಿ 31 ಲಕ್ಷ ರೂ. ಕಳೆದುಕೊಂಡ ಸಂತ್ರಸ್ತರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!