Wednesday, July 22, 2026
Homeಕರಾವಳಿಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ ಹಾಗೂ ಪೋಷಕರ...

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ ಹಾಗೂ ಪೋಷಕರ ಸಭೆ

- Advertisement -
- Advertisement -

ಬೆಳ್ತಂಗಡಿ: ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ 2026 – 27 ನೇ ಸಾಲಿನ ಶಿಕ್ಷಕ ರಕ್ಷಕ ಸಂಘ ರಚನೆ ಮತ್ತು ಪೋಷಕರ ಸಭೆ ಜು.13ರಂದು ನಡೆಯಿತು.

ಅಧ್ಯಕ್ಷರಾಗಿ ಪ್ರಮೀಳಾ , ಉಪಾಧ್ಯಕ್ಷರಾಗಿ ಯಶೋಧರ, ಸದಸ್ಯರಾಗಿ ಮೋಹನ್,ಪುಟ್ಟಣ್ಣ, ಶೀಲಾವತಿ, ಅರುಣಾಕ್ಷಿ, ಸುರೇಶ ಮತ್ತು ಶ್ವೇತ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮತ್ತು ಜೊತೆ ಕಾರ್ಯದರ್ಶಿಯಾಗಿ ಶಿಕ್ಷಕ ಕಿರಣ್ ಕಾರ್ಯನಿರ್ವಹಿಸುವರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಚನ ವೆಂಕಟ ಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ಮಾತನಾಡಿ, ಮಕ್ಕಳ ಸರ್ವಾಂಗಿಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದಷ್ಟೆ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡದೆ ಸಂಸ್ಕೃತಿ ಸಂಸ್ಕಾರ ಕಲಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದು ಎಂದರು.

ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಶಾಲೆಯಲ್ಲಿರುವ ಸೌಲಭ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಶಿಕ್ಷಕಿ ಕೋಕಿಲ 2025-26 ನೇ ಸಾಲಿನ ವರದಿಯನ್ನು ವಾಚಿಸಿದರು.ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ಕುರ್ಕಿಲ , ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ರವಿಚಂದ್ರ ಜೈನ್ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕರಾದ ಕಿರಣ್ ಸ್ವಾಗತಿಸಿ, ಕೃಷ್ಣಾನಂದ ವಂದಿಸಿ, ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!