Tuesday, July 21, 2026
Homeಕರಾವಳಿಸುಳ್ಯ ಕ್ಷೇತ್ರಕ್ಕೆ ₹2.10 ಕೋಟಿ ಗ್ರಾಮೀಣಾಭಿವೃದ್ಧಿ ಅನುದಾನ ಬಿಡುಗಡೆ

ಸುಳ್ಯ ಕ್ಷೇತ್ರಕ್ಕೆ ₹2.10 ಕೋಟಿ ಗ್ರಾಮೀಣಾಭಿವೃದ್ಧಿ ಅನುದಾನ ಬಿಡುಗಡೆ

- Advertisement -
- Advertisement -

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಟ್ಟು ₹2.10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅನುದಾನದ ಅಡಿಯಲ್ಲಿ ಐವರ್ನಾಡು ಗ್ರಾಮದ ಕೃಷಿ ಕಾಲೊನಿ ರಸ್ತೆಗೆ ₹30 ಲಕ್ಷ; ಮುರುಳ್ಯದ ಮಾಣಿಯಡ್ಕ-ಪುಣಚತ್ತಾರು, ಮರ್ಕಂಜದ ಬೊಮ್ಮಾರು-ಕೊಟ್ರಡ್ಕ, ಅರಂತೋಡಿನ ಪಿಂಗಾರ ತೋಟ ಅಡ್ಕಬಳೆ-ರೆಂಜಾಳ, ಆಲೆಟ್ಟಿಯ ಆಸ್ಪಾರೆ-ಅಲೆಟ್ಟಿ, ಕೊಡಿಯಾಲದ ಕಲ್ಲಗದ್ದೆ-ಪೊಟ್ರೆ-ಗ್ರಾಮ ಪಂಚಾಯಿತಿ ಕಚೇರಿ ರಸ್ತೆ ಹಾಗೂ ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು-ಚೆನ್ನಡ್ಕ ರಸ್ತೆ ಕಾಮಗಾರಿಗಳಿಗೆ ತಲಾ ₹25 ಲಕ್ಷ ಹಂಚಿಕೆಯಾಗಿದೆ.

ಇದಲ್ಲದೆ ರಂಗತ್ತಮಲೆ ಕಿರಿಯ ಪ್ರಾಥಮಿಕ ಶಾಲೆ ಬಳಿಯ 300 ಮೀಟರ್ ರಸ್ತೆ ಡಾಂಬರೀಕರಣ ಹಾಗೂ ಅಮರಮುನ್ನೂರು ಗ್ರಾಮದ ಶಾಂತಿಮೂಲೆ-ಕಡಪಾಲ ರಸ್ತೆ ಕಾಮಗಾರಿಗಳಿಗೆ ತಲಾ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಸುಳ್ಯ ಕ್ಷೇತ್ರದ ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ.

- Advertisement -

Latest News

error: Content is protected !!