Thursday, September 10, 2026
Homeಕರಾವಳಿಉಡುಪಿಉಡುಪಿ: ತ್ಯಾಜ್ಯ ತುಂಬಿದ ಪೈಂಟ್ ಡಬ್ಬಿಯಲ್ಲಿ ಜೀವಂತ ನವಜಾತ ಶಿಶು ಪತ್ತೆ!

ಉಡುಪಿ: ತ್ಯಾಜ್ಯ ತುಂಬಿದ ಪೈಂಟ್ ಡಬ್ಬಿಯಲ್ಲಿ ಜೀವಂತ ನವಜಾತ ಶಿಶು ಪತ್ತೆ!

- Advertisement -
- Advertisement -

ಉಡುಪಿ: ನಗರದ ಕೂಸಮ್ಮ ಶಂಭು ಶೆಟ್ಟಿ ಮತ್ತು ಹಾಜಿ ಅಬ್ದುಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಇರುವ ಮಾಂಸಹಾರಿ ಹೊಟೇಲ್ ಬಳಿಯ ತ್ಯಾಜ್ಯದ ಬುಟ್ಟಿಗೆ ನವಜಾತ ಶಿಶುವನ್ನು ಎಸೆದು ಹೋದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಧ್ವಾರಕ ಹೊಟೇಲ್ ಮಾಲೀಕ ಮನೋಹರ ಕಾಮತ್ ರಿಗೆ ಕಸದ ರಾಶಿಯಿಂದ ಮಗು ಅಳುವ ಶಬ್ದ‌ ಕೇಳಿಸಿದ ಹಿನ್ನಲೆಯಲ್ಲಿ ಹುಡುಕಾಡಿದಾಗ ಪೈಂಟ್ ಡಬ್ಬಿಯಲ್ಲಿ. ಮಗು ಕಂಡು ಬಂದಿದೆ. ಅಗಷ್ಟೇ ಹುಟ್ಟಿದ ಮಗು ಇದು ತಿಳಿದುಬಂದಿದೆ.

ಮನೋಹರ್ ಕಾಮತ್ ಕೂಡಲೇ ಸಮಾಜ‌ ಸೇವಕ ನಿತ್ಯನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು ಅವರು ತಕ್ಷಣ ಅಲ್ಲೇ ಇರುವ ಆಸ್ಪತ್ರೆಗೆ ಶಿಶುವನ್ನು ಆರೈಕೆಗೆ ತೆಗೆದುಕೊಂಡು ಹೋಗಿದ್ದಾರೆ. ಮಗು ಸದ್ಯ ಆರೋಗ್ಯವಾಗಿದೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!