
ಬೆಳ್ತಂಗಡಿ:: ಕಳೆದ ಹಲವು ವರ್ಷಗಳಿಂದ ಬಳಂಜ- ಸುದೆಗುಂಡಿ- ತೆಂಕಕಾರಂದೂರು ಗ್ರಾಮದ ಜನರ ಬೇಡಿಕೆಯಾದ ಬಳಂಜ ಸುದೆಗುಂಡಿ ರಸ್ತೆಗೆ ಶಾಸಕ ಹರೀಶ್ ಪೂಂಜರವರು ಜು. 12ರಂದು ಶಿಲಾನ್ಯಾಸ ನೇರವೇರಿಸಿದರು.
ರೂ 1.00 ಕೋಟಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣಗೊಳ್ಳುತ್ತಿದ್ದು ಈ ಬಳಂಜ- ನಾಲ್ಕೂರು- ತೆಂಕಕಾರಂದೂರು ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸುವುದಾಗಿ ಶಾಸಕ ಹರೀಶ್ ಪೂಂಜರವರು ತಿಳಿಸಿದರು.ಬಳಂಜ-ನಾಲ್ಕೂರು- ತೆಂಕಕಾರಂದೂರುವಿನ ಆಟೋ ಚಾಲಕ ಮಾಲಕ ಸಂಘದಿಂದ ಸುಸಜ್ಜಿತ ಆಟೋ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಾಕೇಶ್ ಹೆಗ್ಡೆ, ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಸತೀಶ್ ರೈ ಬಾರ್ದಡ್ಕ,ಹಿರಿಯರಾದ ಯುವರಾಜ್ ಜೈನ್,ಇಂಜೀನಿಯರ್ ದಶರಥ,ಗಣೇಶ್ ಸಂಭ್ರಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗ್ನಿವೀರ್ ಯೋಜನೆಯಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ರಂಜಿತ ಸಹೋದರರ ಹೆತ್ತವರನ್ನು ಗೌರವಿಸಲಾಯಿತು. ಅನುದಾನ ನೀಡಿದ ಶಾಸಕರನ್ನು ಅಭಿನಂದಿಸಿದರು


