Sunday, July 12, 2026
Homeಕರಾವಳಿಬಸ್‌ಗೆ ಢಿಕ್ಕಿಯಾಗಿ ವ್ಯಕ್ತಿ ನಿಧನ

ಬಸ್‌ಗೆ ಢಿಕ್ಕಿಯಾಗಿ ವ್ಯಕ್ತಿ ನಿಧನ

- Advertisement -
- Advertisement -

ಸುಬ್ರಹ್ಮಣ್ಯ: ಬಸ್‌ಗೆ ಢಿಕ್ಕಿಯಾಗಿ 75 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲಿನಲ್ಲಿ ನಡೆದಿದೆ.

ಮೃತರನ್ನು ಏನೆಕಲ್ಲು ಗ್ರಾಮದ ಮುತ್ತಾಜೆಯ ಚೆನ್ನಪ್ಪ ಗೌಡ (75) ಎಂದು ಗುರುತಿಸಲಾಗಿದೆ.

ಚೆನ್ನಪ್ಪ ಗೌಡ ಅವರು ಪಂಜಕ್ಕೆ ತೆರಳಲು ಏನೆಕಲ್ಲು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆಯಲ್ಲಿ ಸುಬ್ರಹ್ಮಣ್ಯದಿಂದ ಪುತ್ತೂರಿನತ್ತ ತೆರಳುತ್ತಿದ್ದ ಬಸ್ ಬಂದಾಗ ಅದನ್ನು ಹತ್ತಲು ಅವಸರದಿಂದ ರಸ್ತೆ ದಾಟಿ ಬಸ್‌ ಕಡೆಗೆ ಓಡಿದ್ದಾರೆ. ಈ ವೇಳೆ ಬಸ್‌ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗಳಾಗಿವೆ.ಅಲ್ಲಿದ್ದ ಸ್ಥಳೀಯರು ಕೂಡಲೇ ಆಂಬುಲೆನ್ಸ್ ಮೂಲಕ ಸುಬ್ರಹ್ಮಣ್ಯ ಆಸ್ಪತ್ರೆಗೆ ಕೊಂಡೋಯ್ಯಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಡಬ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಸೊಸೆಯನ್ನು ಅಗಲಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!