Tuesday, July 7, 2026
Homeತಾಜಾ ಸುದ್ದಿವಯನಾಡ್ ಮಹಾ ದುರಂತ! ಸುರಂಗ ರಸ್ತೆ ಜಾಗದಲ್ಲಿ ಭೀಕರ ಭೂಕುಸಿತ! ಮಣ್ಣಿನಡಿ ಸಿಲುಕಿದ ಹಲವರು!

ವಯನಾಡ್ ಮಹಾ ದುರಂತ! ಸುರಂಗ ರಸ್ತೆ ಜಾಗದಲ್ಲಿ ಭೀಕರ ಭೂಕುಸಿತ! ಮಣ್ಣಿನಡಿ ಸಿಲುಕಿದ ಹಲವರು!

- Advertisement -
- Advertisement -

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭೀಕರ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ‘ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆ’ ನಡೆಯುತ್ತಿರುವ ಸ್ಥಳದಲ್ಲೇ ಈ ದುರಂತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಆತಂಕ ಎದುರಾಗಿದೆ.

ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಮೀ ನಷ್ಟು ದಾಖಲೆ ಪ್ರಮಾಣದ ಭಾರಿ ಮಳೆಯಾಗಿದ್ದು, ಮೀನಾಕ್ಷಿ ಸೇತುವೆಯ ಬಳಿ ಇರುವ ಬೃಹತ್ ಗುಡ್ಡ ಕುಸಿದು ಬಿದ್ದಿದೆ. ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಸೋಮವಾರದಿಂದಲೇ ಸುರಂಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ ಕಾರ್ಮಿಕರ ವಸತಿಗೃಹಗಳ ಮೇಲೆ ಮಣ್ಣು ಬಿದ್ದಿದ್ದು, ಸ್ಥಳೀಯ ನಿವಾಸಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರು ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಇನ್ನು ಎಷ್ಟು ಜನ ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಗುಡ್ಡ ಕುಸಿದ ರಭಸಕ್ಕೆ ಸ್ಥಳೀಯ ವಸತಿ ಮನೆಗಳು ಹಾಗೂ ಹೋಂಸ್ಟೇಗಳು ಸಂಪೂರ್ಣ ನೆಲಸಮವಾಗಿವೆ. ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಹಲವು ಜೆಸಿಬಿ, ಟ್ರಕ್ ಹಾಗೂ ಇತರೆ ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿವೆ. ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ಕೇರಳ ಪೊಲೀಸ್, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ಜಂಟಿಯಾಗಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಕೇರಳ ಸಚಿವ ಟಿ. ಸಿದ್ದಿಕ್ ಮತ್ತು ವಯನಾಡ್ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ರಕ್ಷಣಾ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!