Tuesday, June 9, 2026
Homeತಾಜಾ ಸುದ್ದಿಪಾಕ್​ನಿಂದ ಭಾರತಕ್ಕೆ ವಲಸೆ ಬಂದಿದ್ದ ಹಿಂದು ಕುಟುಂಬವೊಂದರ 11 ಜನರು ಶವವಾಗಿ ಪತ್ತೆ

ಪಾಕ್​ನಿಂದ ಭಾರತಕ್ಕೆ ವಲಸೆ ಬಂದಿದ್ದ ಹಿಂದು ಕುಟುಂಬವೊಂದರ 11 ಜನರು ಶವವಾಗಿ ಪತ್ತೆ

- Advertisement -
- Advertisement -

ಜೋಧ್​ಪುರ: ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಹಿಂದು ಕುಟುಂಬವೊಂದರ 11 ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೋಧ್​ಪುರ ಜಿಲ್ಲೆಯ ಡೆಚು ಪ್ರದೇಶದ ಲೋಡ್ತಾ ಗ್ರಾಮದಲ್ಲಿ ನಡೆದಿದೆ.

ಘಟನಾ ಸ್ಥಳದಲ್ಲಿ ಮೃತ ಪಟ್ಟ ಕುಟುಂಬದ ಓರ್ವ ಸದಸ್ಯ ಮಾತ್ರ ಬದುಕುಳಿದಿದ್ದು, ಆದರೆ ಘಟನೆಯ ಬಗ್ಗೆಯಾಗಲಿ ಅಥಾವ ಸಾವಿನ ಬಗ್ಗೆ ಕಾರಣವಾಗಲಿ ಏನು ತಿಳಿದಿಲ್ಲ ಎಂದು ಪೋಲೀಸರ ಬಳಿ ತಿಳಿಸಿದ್ದಾನೆ.

ಇವರು ಇದ್ದ ಗುಡಿಸಿಲಿನ ಸುತ್ತ ಯಾವುದೋ ರಾಸಾಯನಿಕದ ವಾಸನೆ ಬರುತ್ತಿದ್ದು, ಹಾಗಾಗಿ ಇವರೆಲ್ಲರೂ ಒಟ್ಟಾಗಿ ಯಾವುದೋ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ತೋರುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಬರ್ಹತ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇವರೆಲ್ಲರೂ ಪಾಕ್​ನಿಂದ ವಲಸೆ ಬಂದ ಹಿಂದುಗಳಾಗಿದ್ದರು. ಭಿಲ್​ ಸಮುದಾಯಕ್ಕೆ ಸೇರಿದವರಾಗಿದ್ದರು. ಹೊಟ್ಟೆಪಾಡಿಗಾಗಿ ಇವರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅದಕ್ಕಾಗಿ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದುಕೊಂಡಿದ್ದರು.

- Advertisement -

Latest News

error: Content is protected !!