Monday, June 29, 2026
Homeಕರಾವಳಿಬಳಂಜ ಶಾಲೆಗೆ ಹಸ್ತಾಂತರಿಸಿದ ಶಾಲಾ ಬಸ್ ನಲ್ಲಿ ಗೋಲ್ಮಾಲ್

ಬಳಂಜ ಶಾಲೆಗೆ ಹಸ್ತಾಂತರಿಸಿದ ಶಾಲಾ ಬಸ್ ನಲ್ಲಿ ಗೋಲ್ಮಾಲ್

- Advertisement -
- Advertisement -

ಬೆಳ್ತಂಗಡಿ : ಬಳಂಜ ಶಾಲೆಯಲ್ಲಿ ಶಾಲಾ ಮಕ್ಕಳನ್ನು ಟಿಪ್ಪರ್ ಮತ್ತು ಪಿಕಪ್ ವಾಹನದಲ್ಲಿ ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿ ಶಾಲಾ ಮುಖ್ಯ ಶಿಕ್ಷಕ ಅಮಾನತು ಆಗಿರುವ ಕೆಲವೇ ತಿಂಗಳ ಬೆನ್ನಲ್ಲೇ ಇದೀಗ ಉದ್ಯಮಿಯೊಬ್ಬರು ಸರಕಾರಿ ಶಾಲೆಗೆ ಹಸ್ತಾಂತರಿಸಿದ ಶಾಲಾ ಬಸ್ಸಿಗೆ ಎಫ್.ಸಿ ಮುಗಿದಿದ್ದು ಹಾಗೂ ಹಸ್ತಾಂತರಕ್ಕೆ ಸರಕಾರದ ಪ್ರಕ್ರಿಯೇ ಈವರೆಗೂ ಮಾಡಿರುವುದಿಲ್ಲ ಎಂಬ ಗಂಭೀರ ವಿಚಾರ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಬಳಂಜ ಇಲ್ಲಿಗೆ ಬಳಂಜದ ಉದ್ಯಮಿಯಾದ ಅಶ್ವಥ್ ಹೆಗ್ಡೆ ಬಳಂಜ ಎಂಬವರು ‘ಅಶ್ವಥ್ ಹೆಗ್ಡೆ ಫೌಂಡೇಷನ್’ ವತಿಯಿಂದ ಜೂನ್.15 ರಂದು ಬಳಂಜ ಶಾಲೆಯಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಮತ್ತು ಎಮ್.ಎಲ್.ಸಿ ಪ್ರತಾಪ್‌ ಸಿಂಹ ನಾಯಕ್ ನೇತೃತ್ವದಲ್ಲಿ ಶಾಲಾ ಬಸ್ ಹಸ್ತಾಂತರ ಕಾರ್ಯಕ್ರಮ ನಡೆದಿದೆ. ಈ ಬಸ್ ಹಸ್ತಾಂತರ ವಿಚಾರ ಬೆಳ್ತಂಗಡಿ ಶಿಕ್ಷಣಾಧಿಕಾರಿ ಕಚೇರಿಗೆ ಬಳಂಜ ಶಾಲೆಯಿಂದ ಮಾಹಿತಿ ನೀಡಿಲ್ಲ ಎಂಬುವುದು ಬೆಳಕಿಗೆ ಬಂದಿದೆ.

ಶಾಲಾ ಬಸ್ ಹಸ್ತಾಂತರ ಜೂನ್. 15 ಕ್ಕೆ ಅದ್ದೂರಿಯಾಗಿ ನಡೆಸಿ ಬಸ್ಸನ್ನು ಶಾಲಾ ಟ್ರಸ್ಟ್ ಪಡೆದುಕೊಂಡು ಸರಿಯಾದ ದಾಖಲೆಯಿಲ್ಲದ ಬಸ್ಸ್ ನಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಮಕ್ಕಳನ್ನು ಕರೆದುಕೊಂಡು ಬಂದು ವಾಪಸ್ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಆದ್ರೆ ಜೂ‌ನ್.11 ಕ್ಕೆ ಶಾಲಾ ಬಸ್ಸಿನ ಎಫ್.ಸಿ (ಫಿಟ್ನೆಸ್ ಸರ್ಟಿಫಿಕೇಟ್) ಮುಗಿದಿದೆ ಎಂದು ಆರ್.ಟಿ.ಓ ದಾಖಲೆಯಿಂದ ಬಯಲಾಗಿದೆ.

ಶಾಲಾ ಬಸ್ ಆದ್ರೆ ಮಾಲೀಕ ಮೂರನೇ ವ್ಯಕ್ತಿ: ಉದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಅವರು ಶಾಲಾ ಟ್ರಸ್ಟ್ ಗೆ ನೀಡಿದ ಖಾಸಗಿ ಶಾಲಾ ಬಸ್ ಮಾಲೀಕ ಮಾತ್ರ ಮೂರನೇ ವ್ಯಕ್ತಿಯಾಗಿರುವ ಮೂಡಬಿದಿರೆಯ ತಾಲೂಕಿನ ನಾಟರಾಜ್ ಕಾಂಪ್ಲೆಕ್ಸ್ ನಲ್ಲಿರುವ ಪ್ರಜ್ವಲ್ ಎಂಟರ್ ಪ್ರೈಸಸ್ ಮಾಲೀಕ ಪ್ರವೀಣ್ ಸಿಕ್ವೇರಾ ಎಂಬವರಾಗಿದ್ದಾರೆ.

ಶಿಕ್ಷಣಾಧಿಕಾರಿ ಮಾಹಿತಿ: ಈವರೆಗೆ ಬಸ್ ಹಸ್ತಾಂತರ ಮಾಡಿರುವ ಬಗ್ಗೆ ಶಾಲೆಯಿಂದ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿಲ್ಲ ಮತ್ತು ಬಸ್ ಹಸ್ತಾಂತರ ಮಾಡುವುದಕ್ಕೆ ಸರಕಾರ ಕೆಲ ನಿಯಮಗಳಿದೆ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಆದ್ರೆ ಇಲ್ಲಿ ಯಾವುದನ್ನು ಮಾಡಿಲ್ಲ.ಈ ಬಗ್ಗೆ ಫೋನ್ ಕರೆಯ ಮೂಲಕ ವ್ಯಕ್ತಿಯೊಬ್ಬರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಅಧಿಕಾರಿಯನ್ನು ಶಾಲೆಗೆ ಕಳುಹಿಸಲಾಗಿದೆ ವರದಿ ನೀಡಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣಾಧಿಕಾರಿ ರಾಜಶ್ರೀ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಮುಖ್ಯ ಶಿಕ್ಷಕ ಉಡಾಫೆ ಉತ್ತರ: ಶಾಲಾ ಬಸ್ಸ್ ಬಗ್ಗೆ ಬಳಂಜ ಶಾಲಾ ಮುಖ್ಯ ಶಿಕ್ಷಕ ರಂಗಸ್ವಾಮಿಗೆ ಕರೆ ಮಾಹಿತಿ ಮಾಹಿತಿ ಕೇಳಿದ್ರೆ ನಮಗೆ ವಿಚಾರ ಗೊತ್ತಾಗಿದೆ ನಮಗೆ ಬಸ್ ಇನ್ನೂ ನೀಡಿಲ್ಲ‌‌ ಅದನ್ನು ಬುಧವಾರ ಸರಿ ಮಾಡಿಸುತ್ತಾರೆಂದು ಉಡಾಫೆಯಾಗಿ ಉತ್ತರವನ್ನು ಮಹಾಎಕ್ಸ್ ಪ್ರೆಸ್ ವೆಬ್‌ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ಅಗ್ರಹ: ಅಶ್ವಥ್ ಹೆಗ್ಡೆ ಫೌಂಡೇಷನ್ ಹೆಸರಿನಲ್ಲಿ ಸರಿಯಾದ ದಾಖಲೆಯಿಲ್ಲ ಶಾಲಾ ಬಸ್ ನೀಡಿದ ಉದ್ಯಮಿ ಅಶ್ವಥ್ ಹೆಗ್ಡೆ ಮತ್ತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ಬಳಂಜ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿರುದ್ಧ ತಕ್ಷಣ ಶಿಕ್ಷಣ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಳಂಜ ಗ್ರಾಮಸ್ಥರ ಆಗ್ರಹವಾಗಿದೆ.

- Advertisement -

Latest News

error: Content is protected !!