Sunday, June 28, 2026
Homeಕರಾವಳಿಮಡಿಕೇರಿಯಲ್ಲಿ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ; ಕಾಸರಗೋಡಿನ ಇಬ್ಬರ ಬಂಧನ

ಮಡಿಕೇರಿಯಲ್ಲಿ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ; ಕಾಸರಗೋಡಿನ ಇಬ್ಬರ ಬಂಧನ

- Advertisement -
- Advertisement -

ಮಡಿಕೇರಿ: ಅಕ್ರಮವಾಗಿ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳದ ಕಾಸರಗೋಡು ಮೂಲದ ಇಬ್ಬರು ವೃದ್ಧರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಸರಗೋಡಿನ ಮಡಿ ನಿವಾಸಿ ಶ್ರೀಧರನ್ ಸಿ.ಕೆ. (70) ಮತ್ತು ವಿಷ್ಣು ಆಚಾರ್ಯ (68) ಬಂಧಿತ ಆರೋಪಿಗಳಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಡಿಕೇರಿಯ ಕನ್ನಂಡ ಪಡುಬೀರ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ನಕ್ಷತ್ರ ಆಮೆ ಮಾರಾಟಕ್ಕೆ ಸಂಚು ರೂಪಿಸಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ ಒಂದು ನಕ್ಷತ್ರ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.

ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕಿ ಸಂಗೀತಾ ಜಿ. ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಯಶಸ್ವಿ ದಾಳಿಯಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಪೊಲೀಸ್ ಉಪನಿರೀಕ್ಷಕ ಶಿವಶಂಕ‌ರ್ ಹಾಗೂ ಸಿಬ್ಬಂದಿಯಾದ ಉಮೇಶ್ ಎನ್.ಕೆ., ಶನಂತ ಕೆ.ಪಿ., ದಿವ್ಯಶ್ರೀ ಎಚ್.ಎಸ್. ಮತ್ತು ಸ್ವಾಮಿ ಎಂ. ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!