Friday, June 26, 2026
Homeಕರಾವಳಿಮಂಗಳೂರುನೆಲ್ಯಾಡಿ;ಶ್ರೀರಾಮ ವಿದ್ಯಾಲಯಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ  - ಸ್ವಾಗತ ಕಾರ್ಯಕ್ರಮ

ನೆಲ್ಯಾಡಿ;ಶ್ರೀರಾಮ ವಿದ್ಯಾಲಯಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ  – ಸ್ವಾಗತ ಕಾರ್ಯಕ್ರಮ

- Advertisement -
- Advertisement -

ನೆಲ್ಯಾಡಿ; ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ 30/6/2026 ಬುಧವಾರದಂದು ವಿದ್ಯಾಲಯಕ್ಕೆ ನೂತನ ವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕವಾಗಿ ಹಾಗೂ ಭಾವಪೂರ್ಣವಾಗಿ ಸ್ವಾಗತ ಕಾರ್ಯಕ್ರಮ ನಡೆಯಿತು.

ನೂತನ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆರತಿ ಎತ್ತಿ ತಿಲಕ ಧಾರಣೆ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು . ನೂತನ ವಿದ್ಯಾರ್ಥಿಗಳು ಪೋಷಕರ ಜೊತೆಗೆ ಹೋಮಕುಂಡಕೆ ಹವಿಸ್ಸು ಸಮರ್ಪಣೆ ಮಾಡಿ ನಂತರ ಹಿರಿಯರು ಸಿಹಿ ನೀಡಿ ಆಶೀರ್ವದಿಶಿದರು. ಈ ಮೂಲಕ ವಿದ್ಯಾರ್ಥಿಗಳು ಭಕ್ತಿಯುತ  ಶಿಕ್ಷಣ ಪ್ರಾರಂಭಕ್ಕೆ  ಶ್ರದ್ಧೆಯ ಮನೋಭಾವ ಮೂಡಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವೆಂಕಟರಮಣ ಶ್ರೀಮಾನ್ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯ ನಿರ್ವಹಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಶಾಲೆಯ ಪೋಷಕರಾದ ಶ್ರೀಯುತ ಜಯಂತ್ ಅಂಭಾರ್ಜೆ ಗೊಳಿತೊಟ್ಟು ನಿವಾಸಿ ರಾಷ್ಟೀಯ ಸ್ವಯಂ ಸೇವಕ ಸಂಘ ನೆಲ್ಲ್ಯಾಡಿ ಮಂಡಲದ ಪ್ರಮುಖ್ ಇವರು ಶಾಲೆಯ ಸಂಸ್ಕಾರ, ಸಂಸ್ಕೃತಿ ಯ  ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಯುತ ಮೂಲಚಂದ್ರಕಾಂಚನ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಟೀಮ್ ಸಿಂಧೂರದ ಸದಸ್ಯರು ಶ್ರೀಯುತ ಅನಿಲ್ ಹಾರ್ಪಳ, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಗಣೇಶ್ ವಾಗ್ಲೆ ,ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕಾವ್ಯ ಇವರು ಉಪಸ್ಥಿತರಿದ್ದರು.  ರ್ಯಕ್ರಮದಲ್ಲಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು ವಿದ್ಯಾರ್ಥಿ ಭಕ್ತಿ ಸ್ವಾಗತಿಸಿದರು. ಸ್ಪರ್ಶ ವಂದಿಸಿ, ಯಶ್ವಿನ್ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Latest News

error: Content is protected !!