Wednesday, June 24, 2026
Homeಕರಾವಳಿಕಾರು-ಜೀಪು ಮುಖಾಮುಖಿ ಢಿಕ್ಕಿ; ಆರು ಮಂದಿಗೆ ಗಾಯ

ಕಾರು-ಜೀಪು ಮುಖಾಮುಖಿ ಢಿಕ್ಕಿ; ಆರು ಮಂದಿಗೆ ಗಾಯ

- Advertisement -
- Advertisement -

ವಿಟ್ಲ: ಕೇಪು ಗ್ರಾಮದ ಪಡಿಬಾಗಿಲು ಮತ್ತು ಮೈರ ನಡುವಿನ ತಿರುವಿನಲ್ಲಿ ಜೂನ್ 24ರ ಬುಧವಾರದಂದು ಓಮ್ನಿ ಕಾರು ಮತ್ತು ಜೀಪು ನಡುವೆ ಭೀಕರ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಟ್ಲ ಕಡೆಯಿಂದ ಬಾಯಾರು ಕಡೆಗೆ ಹೋಗುತ್ತಿದ್ದ ಜೀಪು ಹಾಗೂ ಉಪ್ಪಿನಂಗಡಿಗೆ ತೆರಳುತ್ತಿದ್ದ ಓಮ್ನಿ ಕಾರಿನ ನಡುವೆ ಅಂತರರಾಜ್ಯ ಹೆದ್ದಾರಿಯ ಮೈರ ಎಂಬಲ್ಲಿ ಈ ಅಪಘಾತ ನಡೆದಿದೆ. ಢಿಕ್ಕಿಯಾದ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಒಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಲ್ಲಿ ಕಾರು ಚಾಲಕ ಕೃಷ್ಣ, ಪ್ರಕಾಶ್, ಸುಜಾತಾ, ಸುಮಂಗಳ, ಶರಣ್ಯ ಹಾಗೂ ಜೀಪಿನಲ್ಲಿದ್ದ ಉದಯನಾರಾಯಣ ಭಟ್ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!