ಮೈಸೂರು; ವಿಧಾನಪರಿಷತ್ ಚುನಾವಣೆಯಲ್ಲಿ ಯಾರು ಅಡ್ಡಮತದಾನ ಮಾಡಿದ್ದಾರೆ ಅನ್ನೋದು ನನಗೆ ಗೊತ್ತು. ಅಡ್ಡ ಮತದಾನ ನನಗೆ ಆಘಾತ ತಂದಿಲ್ಲ. ಇದರ ನಿರೀಕ್ಷೆ ನನಗೆ ಇತ್ತು ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ,
ಎಂಲ್ಸಿ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ನಮ್ಮ ಶಾಸಕರ ನಿಷ್ಠೆಯ ಪರೀಕ್ಷೆಗಾಗಿಯೇ ನಾನು ಅಭ್ಯರ್ಥಿ ಹಾಕಿದೆ. ಪಕ್ಷದಲ್ಲಿರುವ ಹಿತ ಶತ್ರುಗಳು ಯಾರು ಎಂಬುದನ್ನ ನಾನು ಪತ್ತೆ ಮಾಡಬೇಕಿತ್ತು. ನನಗೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ.ಯಾರನ್ನು ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಈ ಫಲಿತಾಂಶ ನನಗೆ ಕಲಿಸಿದೆ. ಅಡ್ಡ ಮತದಾನ ನನಗೆ ಆಘಾತ ತಂದಿಲ್ಲ. ಇದರ ನಿರೀಕ್ಷೆ ನನಗೆ ಇತ್ತು. ಯಾರ್ಯಾರು ಅಡ್ಡ ಮತದಾನ ಮಾಡಿದರೆ ಎಂಬ ಬಗ್ಗ ನನಗೆ ಸಂಪೂರ್ಣ ಮಾಹಿತಿ ಇದೆ.ಯಾವ ಕಾರಣಕ್ಕೆ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.
ಅವರೆಲ್ಲಾ ಪಕ್ಷ ಬಿಡುವ ಚರ್ಚೆ ಮಾಡಿಯೇ ಅಡ್ಡ ಮತದಾನ ಮಾಡಿದ್ದಾರೆ. ಹೋಗುವವರು ಎಲ್ಲಾ ಹೋಗಲಿ, ನನಗೆ ಪಕ್ಷ ಕಟ್ಟುವುದು ಗೊತ್ತಿದೆ.ಯುವಕರನ್ನ ಕರೆ ತಂದು ಪಕ್ಷ ಕಟ್ಟುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.


