Sunday, June 14, 2026
Homeತಾಜಾ ಸುದ್ದಿನಿರಂತರವಾಗಿ ಸ್ಟಿಂಗ್ ಎನರ್ಜಿ ಡ್ರಿಂಕ್ ಕುಡಿದು ಯುವಕ ಸಾವು

ನಿರಂತರವಾಗಿ ಸ್ಟಿಂಗ್ ಎನರ್ಜಿ ಡ್ರಿಂಕ್ ಕುಡಿದು ಯುವಕ ಸಾವು

- Advertisement -
- Advertisement -

ಯಾದಗಿರಿ; ನಿರಂತರವಾಗಿ ಸ್ಟಿಂಗ್ ಎನರ್ಜಿ ಡ್ರಿಂಕ್ ಕುಡಿದು ಯುವಕ ಸಾವನ್ನಪ್ಪಿರುವ ಘಟನೆ ಯಾದಗಿರಿಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ನಡೆದಿದೆ.ಬಾಲು ದೇಸಾಯಿ (19) ಮೃತ ಯುವಕ.

ಬಾಲು ಕಳೆದ ಹಲವು ದಿನಗಳಿಂದ ಸ್ಟಿಂಗ್‌ ಜ್ಯೂಸ್‌ ಅನ್ನು ಅತಿಯಾಗಿ ಸೇವನೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಬಾಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಪ್ರತಿದಿನ 3 ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌ ಕುಡಿಯುತ್ತಿದ್ದ ಎನ್ನಲಾಗಿದೆ. ಕುಟುಂಬಸ್ಥರು ಮತ್ತು ಸ್ನೇಹಿತರು ಅಷ್ಟೊಂದು ಸ್ಟಿಂಗ್‌ ಜ್ಯೂಸ್‌ ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿ ಹೇಳಿದ್ದರೂ ಆತ ಕೇಳಿರಲಿಲ್ಲ. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತಿಯಾದ ಕೆಫೇನ್ ಹಾಗೂ ರಾಸಾಯನಿಕಗಳ ಸೇವನೆಯಿಂದ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!