Friday, June 12, 2026
Homeಕರಾವಳಿಮಂಗಳೂರುಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್

- Advertisement -
- Advertisement -

ಮಂಗಳೂರು: ತಮಿಳುನಾಡಿ ಸಿಎಂ ಜೋಸೆಫ್ ವಿಜಯ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಟ ವಿಜಯ್ ಅವರ ಭೇಟಿಯ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ ಜೊತೆಗೆ ತಮಿಳುನಾಡು ಪೊಲೀಸರು ಭಾರಿ ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರನ್ನು ಆರೋಗ್ಯ ಸಚಿವ ಯು. ಟಿ. ಖಾದರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಮಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಅವರು ಕೊಲ್ಲೂರಿಗೆ ತೆರಳಿದ್ದಾರೆ. ಮಂಗಳೂರು ಏರ್ಪೋರ್ಟ್ ನಿಂದ ಸುಮಾರು 125 ಕಿ.ಮೀ ದೂರದ ಹಾದಿಯನ್ನು ವಿಜಯ್ ಅವರು ರಸ್ತೆ ಮೂಲಕ ಕ್ರಮಿಸಲಿದ್ದಾರೆ.

ಇನ್ನು ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ನೋಡಲು ಕೊಲ್ಲೂರಿನಲ್ಲಿ ಅಭಿಮಾನಿಗಳು ಮತ್ತು ಭಕ್ತರು ಜಮಾಯಿಸಿದ್ದಾರೆ. ಶಿವಮೊಗ್ಗ, ಬೆಳ್ತಂಗಡಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಿಜಯ್ ಅಭಿಮಾನಿಗಳು ಕೊಲ್ಲೂರಿಗೆ ಆಗಮಿಸಿ ತಮ್ಮ ನೆಚ್ಚಿನ ನಾಯಕನಿಗಾಗಿ ಕಾದು ಕುಳಿತಿದ್ದಾರೆ.

- Advertisement -

Latest News

error: Content is protected !!