Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ : ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗ ದಾಳಿ

ಬೆಳ್ತಂಗಡಿ : ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗ ದಾಳಿ

- Advertisement -
- Advertisement -

ಬೆಳ್ತಂಗಡಿ: ಕಾಡಾನೆ ದಾಂಧಲೆ ಮುಂದುವರಿಯುತ್ತಿದ್ದು ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಮೇ.31 ರಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಮಲವಂತಿಗೆ ಗ್ರಾಮದ ದಿಡುಪೆಯ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬುವರು ಸ್ಥಳೀಯ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ತನ್ನ ಮನೆಗೆ ದ್ವಿಚಕ್ರ ವಾಹನದೊಂದಿಗೆ ಹಿಂದಿರುಗುತ್ತಿದ್ದ ವೇಳೆ ರಾತ್ರಿ ೮:೪೫ಕ್ಕೆ ನೆಲ್ಯಡ್ಕ ರಸ್ತೆ ಬಳಿ ಒಂಟಿ ಸಲಗವೊಂದು ಎದುರಾಗಿದ್ದು ಕಾಡಾನೆ ಏಕಾಏಕಿ ವಾಹನದ ಮೇಲೆ ಎರಗಿ ಸ್ಕೂಟರ್‌ನ್ನು ಜಖಂಗೊಳಿಸಿದೆ. ಆನೆ ಎದುರಾಗುತ್ತಿದ್ದಂತೆ ಬೈಕ್ ಸವಾರ ಸ್ಥಳದಲ್ಲೇ ವಾಹನ ಬಿಟ್ಟು ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಮಳೆ ಸುರಿದ ಕಾರಣದಿಂದ ಕತ್ತಲ ವಾತವರಣದಲ್ಲಿ ರಸ್ತೆಯಲ್ಲಿ ಕಾಡಾನೆ ಇರುವುದು ವಾಹನದ ಬೆಳಕಿನ ಪ್ರಕಾಶದಿಂದ ಸರಿಯಾಗಿ ಗೋಚರಿಸದೆ ಸುಮಾರು ೧೦ ಅಡಿ ಅಂತರದಲ್ಲಿ ಕಾಡಾನೆ ನಾರಾಯಣ ಗೌಡರಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಭಯದಿಂದ ಓಡಿ ಹೋಗಿದ್ದಾರೆ. ಆನೆ ಸ್ಕೂಟರ್ ಮೇಲೆ ತನ್ನ ಗಜ ಹೆಜ್ಜೆಯನ್ನು ಇರಿಸಿ ವಾಹನವನ್ನು ಹಾನಿಗೊಳಿಸಿದೆ.

ಕಾಡಾನೆ-ಮಾನವ ಸಂಘರ್ಷ:ಧರ್ಮಸ್ಥಳ ಬೋಳಿಯಾರ್ ಎಂಬಲ್ಲಿ ಕಾಡನೆ ಆಟೋ ರಿಕ್ಷಾವನ್ನು ಜಖಂಗೊಳಿಸಿತ್ತು. ನೆರಿಯ ಬಯಲ ಎಂಬಲ್ಲಿ ಆನೆ ಕಾರಿನ ಮೇಲೆ ಹಾಗೂ ಶಿಶಿಲದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಿತ್ತದ್ದ ವೇಳೆ ಬೈಕ್ ಮೇಲೆ ಕಾಡಾನೆ ಎರಗಿದ ಪ್ರಕರಣ ತಾಲೂಕಿನಲ್ಲಿ ನಡೆದಿದೆ. ಸೌತಡ್ಕದಲ್ಲಿ ಕಾಡಾನೆ ದಾಳಿಗೆ ಬಾಲಕೃಷ್ಟ ಶೆಟ್ಟಿ ಎಂಬುವರು ಬಲಿಯಾಗಿದ್ದರು. ಇದಲ್ಲದೇ ಕೃಷಿಭೂಮಿಗೆ ಹಾಗಾಗ ಕಾಡಾನೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರಿಗೆ ಕಾಡಾನೆ ಎದುರಾಗುತ್ತಿರುವುದು ಸರ್ವೇ ಸಮಾನ್ಯವಾಗಿ ಬಿಟ್ಟಿದ್ದು ಸರಕಾರ ಹಾಗೂ ಇಲಾಖೆ ಕಾಡಾನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!