Friday, June 26, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಮಾನವೀಯತೆ ಮೆರೆದ ಖಾಸಗಿ ಬಸ್ ಚಾಲಕ, ನಿರ್ವಾಹಕ: ಬಸ್ ನಿಂದ ಆಯತಪ್ಪಿ ಬಿದ್ದು ಗಾಯಗೊಂಡ...

ಮಂಗಳೂರಿನಲ್ಲಿ ಮಾನವೀಯತೆ ಮೆರೆದ ಖಾಸಗಿ ಬಸ್ ಚಾಲಕ, ನಿರ್ವಾಹಕ: ಬಸ್ ನಿಂದ ಆಯತಪ್ಪಿ ಬಿದ್ದು ಗಾಯಗೊಂಡ ತಾಯಿ-ಮಗುವನ್ನು ತಮ್ಮ ಬಸ್ಸಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬಸ್ಸಲ್ಲೇ ಆಸ್ಪತ್ರೆಗೆ ದಾಖಲಿಸಿದ ಮತ್ತೊಂದು ಬಸ್ ಸಿಬ್ಬಂದಿ

- Advertisement -
- Advertisement -

ಮಂಗಳೂರು; ಜಗತ್ತಿನಲ್ಲೇ ಮಾನವೀಯತೆ ಇನ್ನು ಉಳಿದಿದ್ಯಾ ಅಂತಾ ಪ್ರಶ್ನೆ ಮಾಡಿಕೊಳ್ಳುವ ಈ ಕಾಲದಲ್ಲಿ ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಚಾಲಕ ನಿರ್ವಾಹಕರಿಬ್ಬರು ಮಾನವೀಯತೆ ಇನ್ನೂ ಕೂಡ ಉಸಿರಾಡುತ್ತಿದೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ.

ಮಂಗಳೂರಿನ ಮರಕಡ ಜಂಕ್ಷನ್ ನಲ್ಲಿ ಮುಂದಿನ ಬಸ್ ನಿಂದ ಆಯತಪ್ಪಿ ತಾಯಿ ಹಾಗೂ ಮಗು ಗಾಯಗೊಂಡಿದ್ದರು. ಇದನ್ನು ಗಮನಿಸಿದ 13B ಮಾಸ್ಟರ್ ಸಿಟಿ ಬಸ್ ನ ನಿರ್ವಾಹಕ ಸಂದೀಪ್ ಹಾಗೂ ಚಾಲಕ ದಯಾನಂದ ಅವರು ತಮ್ಮ ಬಸ್ ಅನ್ನು ನಿಲ್ಲಿಸಿ ಇಬ್ಬರನ್ನು ರಕ್ಷಿಸಿ ತಮ್ಮ ಬಸ್ಸಿನಲ್ಲಿ ಕೂರಿಸಿದ್ದಾರೆ. ತಮ್ಮ ಬಸ್ ನಲ್ಲಿದ್ದ ಪ್ರಯಾಣಿಕರನ್ನೆಲ್ಲಾ ಇಳಿಸಿ ಅದೇ ಬಸ್ ನಲ್ಲಿ ತಾಯಿ ಮಗುವನ್ನು ಎಜೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.  ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚಾಲಕ ಹಾಗೂ ನಿರ್ವಾಹಕ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!