- Advertisement -
![]()
- Advertisement -
ಬಂಟ್ವಾಳ; ಲಾರಿಗೆ ಡಿಯೋ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ಮಾಣಿ ಸಮೀಪ ನಡೆದಿದೆ. ಸುಳ್ಯದ ಗಾಂಧಿನಗರ ನಿವಾಸಿ ಖಲಂದರ್ ಷಾ ಮೃತ ದುರ್ದೈವಿ.
ಖಲಂದರ್ ಷಾ ಡಿಯೋ ಸ್ಕೂಟರ್ ನಲ್ಲಿ ಕಲ್ಲಡ್ಕದಿಂದ ಪುತ್ತೂರಿನತ್ತ ಬರುತ್ತಿದ್ದರು. ಈ ವೇಳೆ ಎದುರು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಖಲಂದರ್ ಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


