Friday, June 5, 2026
Homeಕರಾವಳಿಮಂಗಳೂರುಪುತ್ತೂರು; ಕೆಯ್ಯೂರಿನ ಯುವಕ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣು

ಪುತ್ತೂರು; ಕೆಯ್ಯೂರಿನ ಯುವಕ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಪುತ್ತೂರು; ಕೆಯ್ಯೂರಿನ ಯುವಕನೊಬ್ಬ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕೆಯ್ಯೂರು ಪಂಚಾಯತ್ ಕಛೇರಿ ಬಳಿಯ ನಿವಾಸಿ ದಿ.ರಘುನಾಥ ಪೂಜಾರಿ ಎಂಬವರ ಪುತ್ರ ಕಾರ್ತಿಕ್ (27) ಮೃತರು.

ಕಾರ್ತಿಕ್ ರವರು ಮುಂಬೈ ಉರ್ಲ ಎಂಬಲ್ಲಿ ಕಳೆದ ವರ್ಷಗಳಿಂದ ಹೊಟೇಲ್ ಉದ್ಯೋಗಿಯಾಗಿದ್ದರು. ಅಲ್ಲೇ ವಾಸವಿದ್ದರು. ಮೇ 21 ರಂದು ತನ್ನ ರೂಮ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಮೃತದೇಹವನ್ನು ಕೆಯ್ಯೂರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

- Advertisement -

Latest News

error: Content is protected !!