Friday, June 5, 2026
Homeಕರಾವಳಿಮಂಗಳೂರುಪುತ್ತೂರು: ಡಿವೋರ್ಸ್ ನೀಡುವಂತೆ ಮಹಿಳೆಗೆ ಕಿರುಕುಳ; ದೂರು ದಾಖಲು

ಪುತ್ತೂರು: ಡಿವೋರ್ಸ್ ನೀಡುವಂತೆ ಮಹಿಳೆಗೆ ಕಿರುಕುಳ; ದೂರು ದಾಖಲು

- Advertisement -
- Advertisement -

ಪುತ್ತೂರು: ಡಿವೋರ್ಸ್ ನೀಡುವಂತೆ ಮಹಿಳೆಗೆ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಡ್ಪಳ್ಳಿಯ ಸಂಶೀನಾ ಎಂಬ ಮಹಿಳೆ ಪತಿ ಸುಳ್ಯದ ಮಹಮ್ಮದ್ ರಫಿಕ್ ವಿರುದ್ಧ ದೂರು ನೀಡಿದ್ದಾರೆ.

2021ರಲ್ಲಿ ಸುಳ್ಯದ ಮಹಮ್ಮದ್ ರಫಿಕ್ ಎಂಬವರೊಂದಿಗೆ ವಿವಾಹವಾಗಿತ್ತು. ವಿವಾಹದ ಬಳಿಕ ಅವರ ಗಂಡ 4 ವರ್ಷಗಳ ಕಾಲ ವಿದೇಶದಲ್ಲಿದ್ದು, 2025ನೇ ವರ್ಷದ ನವೆಂಬ‌ರ್ ತಿಂಗಳಲ್ಲಿ ಊರಿಗೆ ಮರಳಿದ್ದರು. 2025ನೇ ನವೆಂಬರ್ ತಿಂಗಳಲ್ಲಿ ಮಹಮ್ಮದ್ ರಫಿಕ್ ಅವರು ಎರ್ನಾಕುಲಂ ಎಂಬಲ್ಲಿ ಕೆಲಸಕ್ಕೆ ಹೋದವರು 2026ರ ಜ.25ಕ್ಕೆ ವಾಪಾಸಾಗಿದ್ದರು. ಹಾಗೆ ಬಂದವರು ಪತ್ನಿಗೆ ಹಲ್ಲೆ ನಡಿಸಿದ್ದಾರೆ. ಇದರ ಜೊತೆಗೆ ನಾದಿನಿ ನಸೀಮಾ ಎಂಬವರು ಕೂಡಾ ಕಿರುಕುಳ ನೀಡಿ ನನ್ನ ಸಹೋದರನಿಗೆ ನೀನು ಡಿವೋರ್ಸ್ ನೀಡು ಎಂದು ಒತ್ತಾಯಿಸಿದ್ದಾರೆ.

ಮನೆಯ ಈ ಘಟನೆಗಳು ಇಂದಲ್ಲ ನಾಳೆ ಸರಿ ಹೋಗಬಹುದು ಎಂಬ ಉದ್ದೇಶದಿಂದ ಸಂಶೀನ ಅವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!