Saturday, June 13, 2026
Homeಕೊಡಗುಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಭೀಕರ ಘಟನೆ; ಸಾಕಾನೆಗಳ ಕಾದಾಟಕ್ಕೆ ಮಹಿಳೆ ಬಲಿ

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಭೀಕರ ಘಟನೆ; ಸಾಕಾನೆಗಳ ಕಾದಾಟಕ್ಕೆ ಮಹಿಳೆ ಬಲಿ

- Advertisement -
- Advertisement -

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಭೀಕರ ಘಟನೆ ನಿನ್ನೆ(ಮೇ.17)ರ ಸಂಜೆ ನಡೆದಿದೆ. ಸಾಕಾನೆಗಳ ಕಾದಾಟಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ತಮಿಳುನಾಡು ಮೂಲದ ಜಿನ್ಶು (33) ಮೃತ ಮಹಿಳೆ.

ವಾರಾಂತ್ಯದ ಹಿನ್ನೆಲೆ ಜಿನ್ನು ಅವರು ಕುಟುಂಬದೊಂದಿಗೆ ದುಬಾರೆ ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆನೆಗಳನ್ನು ಸ್ನಾನ ಮಾಡಿಸಲಾಗುತ್ತಿತ್ತು.ಆಗ ಕಂಜನ್ ಎಂಬ ಆನೆ ಮಾರ್ತಾಂಡ ಎಂಬ ಆನೆಗೆ ಜೋರಾಗಿ ತಿವಿದಿದೆ. ಕೋಪಗೊಂಡ ಮಾರ್ತಾಂಡ ಹಾಗೂ ಕಂಜನ್ ಆನೆಗಳ ಮಧ್ಯೆ ಕಾದಾಟ ಶುರುವಾಗಿದೆ. ಅಲ್ಲಿದ್ದವರು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆನೆಯೊಂದು ಹತೋಟಿ ತಪ್ಪಿ ಜಿನ್ಶು ಅವರ ಮೇಲೆ ಬಿದ್ದಿದೆ. ಆನೆಯ ಭಾರಕ್ಕೆ ಸಿಲುಕಿದ ಜಿನ್ಶು ಸಾವನ್ನಪ್ಪಿದ್ದಾರೆ. 

- Advertisement -

Latest News

error: Content is protected !!