Friday, June 5, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಕುಸಿದು ಬಿದ್ದು ಯುವ ಕೃಷಿಕ ಸಾವು

ಉಪ್ಪಿನಂಗಡಿ: ಕುಸಿದು ಬಿದ್ದು ಯುವ ಕೃಷಿಕ ಸಾವು

- Advertisement -
- Advertisement -

ಉಪ್ಪಿನಂಗಡಿ: ಕುಸಿದು ಬಿದ್ದು ಯುವ ಕೃಷಿಕ ಸಾವನ್ನಪ್ಪಿರುವ ಘಟನೆ ಸಂಪ್ಯಾಡಿ ಎಂಬಲ್ಲಿ ನಡೆದಿದೆ.ರಾಧಾಕೃಷ್ಣ ಗೌಡ ಅವರ ಪುತ್ರ ದಾಮೋದರ (31) ಮೃತ ಯುವಕ.

ದಾಮೋದರ ಅವರು ಕೃಷಿಕರಾಗಿದ್ದು, ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಹಠಾತ್‌ ಕುಸಿದು ಬಿದ್ದಿದ್ದು, ಪರಿಣಾಮ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತರು ಅವಿವಾಹಿತರಾಗಿದ್ದು, ತಂದೆ ರಾಧಾಕೃಷ್ಣ ಗೌಡ, ತಾಯಿ ಸುಶೀಲ ಅವರನ್ನು ಅಗಲಿದ್ದಾರೆ. ಮೃತರ ಮನಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ

- Advertisement -

Latest News

error: Content is protected !!