Saturday, June 6, 2026
Homeಕರಾವಳಿಮಂಗಳೂರುಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಹಿನ್ನೆಲೆ; ಪುತ್ತೂರಿಗೆ ವಿವಾಹ ಸಮಾರಂಭವೊಂದಕ್ಕೆ ಬಸ್ಸಿನಲ್ಲಿ...

ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಹಿನ್ನೆಲೆ; ಪುತ್ತೂರಿಗೆ ವಿವಾಹ ಸಮಾರಂಭವೊಂದಕ್ಕೆ ಬಸ್ಸಿನಲ್ಲಿ ಬಂದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ

- Advertisement -
- Advertisement -

ಪುತ್ತೂರು: ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಬೆನ್ನಲ್ಲೇ  ಪುತ್ತೂರಿಗೆ ವಿವಾಹ ಸಮಾರಂಭವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಬಸ್ಸಿನಲ್ಲೇ ಬಂದಿದ್ದಾರೆ.


ಪಕ್ಷದ ಪುತ್ತೂರು ನಗರ ಮಂಡಲದ ಕಾರ್ಯದರ್ಶಿಯವರ ವಿವಾಹ ಅರತಕ್ಷತೆ ಕಾರ್ಯಕ್ರಮಕ್ಕೆ ತೆರಳಲು ಸತೀಶ್ ಕುಂಪಲ ಅವರು ತಮ್ಮ ವೈಯಕ್ತಿಕ ಕಾರನ್ನು ಬಳಸದೆ, ಮಂಗಳೂರಿನ ಕೆ.ಎಸ್‌.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಪ್ರಯಾಣಿಸಿದರು. ಪುತ್ತೂರು ನಿಲ್ದಾಣಕ್ಕೆ ತಲುಪಿದ ಬಳಿಕ ಅಲ್ಲಿಂದ ಆಟೋ ರಿಕ್ಷಾ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದರು.

“ದೇಶದ ಹಿತದೃಷ್ಟಿಯಿಂದ ಇಂಧನ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಬಳಸಬೇಕೆಂಬ ಪ್ರಧಾನಿಯವರ ಆಶಯದಂತೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು,” ಎಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.

- Advertisement -

Latest News

error: Content is protected !!