Wednesday, June 3, 2026
Homeತಾಜಾ ಸುದ್ದಿಜ್ಯೋತಿಷಿಯನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಾಡಿದ್ದ ಆದೇಶ ರದ್ದು ಮಾಡಿದ ತಮಿಳುನಾಡು ಸರ್ಕಾರ

ಜ್ಯೋತಿಷಿಯನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಾಡಿದ್ದ ಆದೇಶ ರದ್ದು ಮಾಡಿದ ತಮಿಳುನಾಡು ಸರ್ಕಾರ

- Advertisement -
- Advertisement -

ಚೆನ್ನೈ: ಜ್ಯೋತಿಷಿಯನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿದ್ದ ಆದೇಶವನ್ನು ತಮಿಳುನಾಡು ಸರ್ಕಾರ ಹಿಂಪಡೆದಿದೆ.

ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ರಾಜಕೀಯ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನಿನ್ನೆ ನೇಮಕ ಮಾಡಲಾಗಿತ್ತು. ಈ ಆದೇಶಕ್ಕೆ ಟಿವಿಕೆ ಮಿತ್ರಪಕ್ಷಗಳು ಸೇರಿದಂತೆ ವಿಪಕ್ಷ ಡಿಎಂಕೆ ಹಾಗೂ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ತಮಿಳುನಾಡು ಸರ್ಕಾರ ನೇಮಕಾತಿ ಆದೇಶವನ್ನು ವಾಪಸ್ ಪಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಗೆಲುವು ಸಾಧಿಸಲಿದೆ ಎಂದು ಸಿಎಂ ವಿಜಯ್ ಸಲಹೆಗಾರರಾಗಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಭವಿಷ್ಯ ನುಡಿದಿದ್ದರು‌.

ತಮಿಳುನಾಡಿನ ಈರೋಡ್ ಮೂಲದವರಾದ ಜ್ಯೋತಿಷಿ ಸುಮಾರು ನಲ್ವತ್ತು ವರ್ಷಗಳಿಂದ ಜ್ಯೋತಿಷ್ಯ ಕಾರ್ಯದಲ್ಲಿ ನಿರತರಾಗಿದ್ದು ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೂ ಖಾಸಗಿ ಜ್ಯೋತಿಷಿ ಆಗಿದ್ದರು.

- Advertisement -

Latest News

error: Content is protected !!