Saturday, June 6, 2026
Homeಕರಾವಳಿರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ

ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಕಾನ ಜಂಕ್ಷನ್ ಬಳಿ ಡಿವೈಎಫ್ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವದಲ್ಲಿ ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿರುವ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಕಾಮಗಾರಿ ನಡೆಸಿ ದುರಸ್ಥಿ ಮಾಡುವಂತೆ ಒತ್ತಾಯಿಸಿ ಇಂದು ರಸ್ತೆ ತಡೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, “ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭಾವಿಸಿದಾಗ ಪೊಲೀಸರು ರಸ್ತೆಯ ನಿರ್ವಹಣೆ ಜವಾಬ್ದಾರಿ ವಹಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಮುಂದಿನ 15ದಿನಗೊಳಗಾಗಿ ಕಾನ-ಜೋಕಟ್ಟೆ ರಸ್ತೆ ದುರಸ್ಥಿ ಆಗದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಬಿ.ಕೆ ಇಮ್ತಿಯಾಜ್ ಎಚ್ಚರಿಕೆ ನೀಡಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸೆಕ್ರೆಡ್ ಹಾರ್ಟ್ ಚರ್ಚ್ ಸುರತ್ಕಲ್ ಇದರ ಉಪಾಧ್ಯಕ್ಷರಾದ ಲಿಗೋರಿ ಜಾರ್ಜ್, ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯೋಬ್ ಬೆಂಗ್ರೆ, ಆಟೋ ರಿಕ್ಷಾ ಚಾಲಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ ಬಿ.ಕೆ ಮಸೂದ್, ಅಜ್ಮಾಲ್ ಅಹ್ಮದ್, ಶ್ರೀನಾಥ್ ಕುಲಾಲ್, ಜಗದೀಶ್, ಅಬ್ದುಲ್ ರಹೀಮ್, ಅಬೂಬಕ್ಕರ್ ಕೆ.ಪಿ, ಫ್ರಾನ್ಸಿಸ್ ಡಿಸೋಜಾ, ಮುಸ್ತಫಾ ಒಟ್ಟೆಕಾಯರ್, ಲಕ್ಸ್ಮಿಷ ಅಂಚನ್, ಹಂಝ ಮೈಂದಗುರಿ, ಸುಧೀರ್ ಕೋಡಿಕೆರೆ, ಐ ಮೊಹಮ್ಮದ್, ಇಬ್ರಾಹಿಂ ಹಳೆಮನೆ,ಹನೀಫ್ ಕುಳಾಯಿ, ನವಾಜ್ ಕುಳಾಯಿ, ಸಿರಾಜ್ ಮೈಂದಗುರಿ, ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!