Saturday, June 6, 2026
Homeಕರಾವಳಿಮಂಗಳೂರುರಕ್ಷಿತ್ ಶಿವರಾಂ ನೇತೃತ್ವದಲ್ಲಿ ಅರಣ್ಯ ಸಚಿವರನ್ನು ಭೇಟಿಯಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸ್ವಯಂ ಪ್ರೇರಿತ ಪುನರ್ವಸತಿಗೆ...

ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಅರಣ್ಯ ಸಚಿವರನ್ನು ಭೇಟಿಯಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿರುವ ಕುಟುಂಬಗಳು

- Advertisement -
- Advertisement -

ಬೆಳ್ತಂಗಡಿ : ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 9 ಕುಟುಂಗಳು ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿದ್ದು. ಈಗಾಗಲೇ ಕಡತಗಳು ಸಿದ್ಧಪಡಿಸಿ ಅಂದಾಜು ಮೊತ್ತವನ್ನು ಸರ್ಕಾರಕ್ಕೆ  ಸಲ್ಲಿಸಿರುತ್ತಾರೆ. ದಕ್ಷಿಣ ಕನ್ನಡ   ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಮುಕ್ತಾಯದ ಹಂತಕ್ಕೆ ಬಂದಿರುತ್ತದೆ. ಈ ಬಗ್ಗೆ ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿರುವ  ಕುಟುಂಬಗಳು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ನೇತೃತ್ವದಲ್ಲಿ  ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಮೇ.7 ರಂದು ಭೇಟಿ ಮಾಡಿ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 9 ಕುಟುಂಬಗಳ ಪುನರ್ವಸತಿಗೆ,ಅಂದಾಜು ಮೊತ್ತ 10 ಕೋಟಿ ರೂಪಾಯಿ ಅನುದಾನವನ್ನು  ಮಂಜೂರು ಗೊಳಿಸುವಂತೆ  ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪರಿಸರ  ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಮಲವಂತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ  ಕೆ ಯು ಮೊಹಮ್ಮದ್, ಫಲಾನುಭವಿಗಳಾದ  ಸಂತೋಷ್ ಗೌಡ, ನಾರಾಯಣ ಮಲೆಕುಡಿಯ, ಬಾಲಕೃಷ್ಣ ಮಲೆಕುಡಿಯ, ಹರೀಶ್ ಮಲೆಕುಡಿಯ, ಪುರಂದರ ಗೌಡ  ಉಪಸ್ಥಿತರಿದ್ದರು

- Advertisement -

Latest News

error: Content is protected !!