ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧನ ಬೈಂದೂರು ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನದ ಜೋಧ್ ಪುರ್ ನಿವಾಸಿ ಮಹೇಂದ್ರ ಸೈನ್(23) ಬಂಧಿತ ಆರೋಪಿ.
ಆರೋಪಿ ಬೈಂದೂರು ಯಡ್ತರೆ ಗ್ರಾಮದ ಎಸ್. ಬಿ. ಐ. ಬ್ಯಾಂಕ್ ಹಿಂಭಾಗದಲ್ಲಿ ರಾಜಸ್ತಾನ್ ಮೂಲದ ರಾವಲ್ ಸಿಂಗ್ ಎಂಬವರು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗಿನ ಗೋದ್ರೇಜ್‌ನಲ್ಲಿ ಇರಿಸಿದ್ದ 6 ಲಕ್ಷ ನಗದು ಹಣವನ್ನು ಕಳವು ಮಾಡಿದ್ದ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಬೈಂದೂರು ವ್ಯತ್ತನಿರೀಕ್ಷಕರಾದ ಶಿವಕುಮಾರ್ ಬಿ. ರವರು ಆರೋಪಿ ಪತ್ತೆಗಾಗಿ ಬೈಂದೂರು ಪಿ.ಎಸ್‌ಐ, ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು ಈ ವಿಶೇಷ ತಂಡವು ತಾಂತ್ರಿಕ ವಿಧಾನ ಹಾಗೂ ಸ್ಮಳೀಯ ಬಾತ್ಮೀದಾರರ ಸಹಕಾರದೊಂದಿಗೆ ದಿನಾಂಕ 07.05.2026 ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ, ಆತನು ಕಳವು ಮಾಡಿರುವ ರೂ 6 ಲಕ್ಷ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಮಾನ್ಯ ಉಡುಪಿ ಜಿಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್. ರವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ ಉಡುಪಿ ಜಿಲ್ಲೆ, ರವರ ನಿರ್ದೇಶನದಂತೆ ಮತ್ತು ಶ್ರೀ ಹೆಚ್.ಡಿ. ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲಿ ನಡೆಸಲಾಗಿರುತ್ತದೆ,
ಈ ಕಾರ್ಯಾಚರಣೆಯನ್ನು ಶಿವಕುಮಾರ್ ಬಿ, ಸಿಪಿಐ ಬೈಂದೂರುರವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿಎಸ್,ಐ ರವರಾದ ಸುನೀಲ್ ಕುಮಾರ್, ಬಿ., ಮತ್ತು ನವೀನ ಬೋರಕರ, ಹಾಗೂ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಂತೋಷ ಕುಮಾರ ಯು, ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಹಾಗೂ ಬೈಂದೂರು ವೃತ್ತ ಕಛೇರಿ ಸಿಬ್ಬಂದಿಯವರಾದ ಶಿವಾನಂದ ಹುದಾರ ಅಶೋಕ ರಾಠೋಡ ಮತ್ತು ಉಡುಪಿ ಜಿಲ್ಲಾ,, ಪೊಲೀಸ್ ಕಛೇರಿ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರು ಸಹಕರಿಸಿರುತ್ತಾರೆ.


