
ಮಂಗಳೂರು: ಮಹಿಳೆಯ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನದ ಭರತ್ ಪುರ ಜಿಲ್ಲೆಯ ಬಹುದ್ದೂರ್ ಸಿಂಗ್ ಬಂಧಿತ ಆರೋಪಿ.
ಪ್ರಕರಣದ ಆರೋಪಿ ಬಹದ್ದೂರ್ ಸಿಂಗ್ @ ಬಹದ್ದೂರ್ @ ಬಯ್ಯ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿ ಮೇಲೆ ದಸ್ತಗಿರಿ ವಾರಂಟ್ ನ್ನು ಹೊರಡಿಸಿದ್ದು ಆರೋಪಿಯು ರಾಜಸ್ಥಾನ ರಾಜ್ಯದ ವಿಳಾಸದಲ್ಲಿ ವಾಸವಿರದೇ ಇದ್ದದ್ದರಿಂದ ಬಂಧಿಸಲು ಅನಾನುಕೂಲವಾದ್ದರಿಂದ ಈತನ ಮೇಲೆ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿರುತ್ತದೆ. ಈ ಬಗ್ಗೆ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಠಾಣಾ ಹೆಚ್.ಸಿ 655ನೇ ಅಜಿತ್ ಮ್ಯಾಥ್ಯು, ಸಿಪಿಸಿ 2475ನೇ ಸುನೀಲ್ ಕುಸನಾಳ, ಸಿಪಿಸಿ 2354ನೇ ಮೋಹನ್ ಎಂಬವರನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಿದಂತೆ ಆತನ ಬಗ್ಗೆ ಮಾಹಿತಿ ಪಡೆದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿ ಗೆ ತೆರಳಿ 2ನೇ ಆರೋಪಿಯಾದ ಬಹುದ್ದೂರ್ ಸಿಂಗ್ ನನ್ನು ದಿನಾಂಕ: 03.05.2026 ರಂದು ಮಧ್ಯಾಹ್ನ 1:00 ಗಂಟೆಗೆ ದಸ್ತಗಿರಿ ಮಾಡಲಾಗಿದ್ದು ಈ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ..
ಆರೋಪಿಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 655ನೇ ಅಜಿತ್ ಮ್ಯಾಥ್ಯು, ಸಿಪಿಸಿ 2475ನೇ ಸುನೀಲ್ ಕುಸನಾಳ, ಸಿಪಿಸಿ 2354ನೇ ಮೋಹನ್ ರವರು ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂಬಾತನ್ನು ದಸ್ತಗಿರಿ ಮಾಡಿರುತ್ತಾರೆ ಠಾಣಾ ಹೆಚ್.ಸಿ 611ನೇ ರಾಜೇಂದ್ರ ಪ್ರಸಾದ್, ಪಿಸಿ 3202ನೇ ಸತೀಶ್ ರವರು ಸಹಕರಿಸಿರುತ್ತಾರೆ.


