- Advertisement -
![]()
- Advertisement -
ಚಾಮರಾಜನಗರ: ನಿಧಿಯ ಆಸೆಗಾಗಿ ತಾಯಿಯನ್ನೇ ಪುತ್ರ ಬಲಿ ಕೊಡಲು ಮುಂದಾಗಿದ್ದ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಕೊಂಡಯನ್ ಮಾದಶೆಟ್ಟಿ ಎಂಬಾತ ಈ ದುಷ್ಕೃತ್ಯಕ್ಕೆ ಮುಂದಾಗಿದ್ದು, ತನ್ನ ತಾಯಿ ಎಂಬತ್ತು ವರ್ಷದ ಮಾದಮ್ಮಶೆಟ್ಟಿ ಅವರನ್ನು ಬಲಿ ಕೊಡಲು ಸಿದ್ಧತೆ ನಡೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ತನ್ನ ಮನೆಯಲ್ಲೇ ಗುಂಡಿ ತೆಗೆದು ಪೂಜೆ ನಡೆಸುತ್ತಿದ್ದ ವೇಳೆ ಮನೆಯ ಅಕ್ಕ ಪಕ್ಕದವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಪುತ್ರ ಮಾದಶೆಟ್ಟಿ ಎಸ್ಕೇಪ್ ಆಗಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
- Advertisement -


