Saturday, June 6, 2026
Homeಕರಾವಳಿಮಂಗಳೂರುಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗುದದ್ವಾರದಲ್ಲಿ ಮೊಬೈಲ್‌ ಫೋನ್ ಅಡಗಿಸಿಟ್ಟು ಸಿಕ್ಕಿ ಬಿದ್ದ ವಿಚಾರಣಾಧೀನ ಕೈದಿ

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗುದದ್ವಾರದಲ್ಲಿ ಮೊಬೈಲ್‌ ಫೋನ್ ಅಡಗಿಸಿಟ್ಟು ಸಿಕ್ಕಿ ಬಿದ್ದ ವಿಚಾರಣಾಧೀನ ಕೈದಿ

- Advertisement -
- Advertisement -

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗುದದ್ವಾರದಲ್ಲಿ ಮೊಬೈಲ್‌ ಫೋನ್ ಅಡಗಿಸಿಟ್ಟು ವಿಚಾರಣಾಧೀನ ಕೈದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ.

ಮುಹಮ್ಮದ್ ತೋಹಿದ್ ಸಿಕ್ಕಿಬಿದ್ದ ಕೈದಿ.ಅನಾರೋಗ್ಯ ಹಿನ್ನೆಲೆ ಏ .24ರಂದು ಮುಹಮ್ಮದ್ ತೋಹಿದ್ ನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಪಡೆದು ಏ. 30 ರಂದು ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆ ತಂದಾಗ ಕೆ ಎಸ್ ಐ ಎಸ್‌ ಎಫ್ ಸಿಬ್ಬಂದಿ ಮೆಟಲ್ ಡಿಟೆಕ್ಟರ್ ಯಂತ್ರ ಬಳಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಗುದದ್ವಾರದ ಬಳಿ ಶಬ್ದ ಕೇಳಿ ಬಂದ ಹಿನ್ನೆಲೆ ತೋಹಿದ್ ನನ್ನು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ಸಂದರ್ಭ ಮೊಬೈಲ್ ಬಚ್ಚಿಟ್ಟುಕೊಂಡಿರುವುದಾಗಿ ಕೈದಿ ತೋಹಿದ್ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಕೈದಿಯನ್ನು ಮತ್ತೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!