Saturday, June 6, 2026
Homeಕರಾವಳಿಉಡುಪಿಕಾರ್ಕಳ; ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕಾರ್ಕಳ; ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕಾರ್ಕಳ; ಪತ್ತೊಂಜಿ ಕಟ್ಟೆ ಎಂಬಲ್ಲಿ ಏಪ್ರಿಲ್ 23ರಂದು ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನಾಭರಣ ಕಳ್ಳತನ ಮಾಡಿದ ಬೈರಂಪಳ್ಳಿ ಗ್ರಾಮದ ಆನಂದ ಕುಲಾಲ್ (40) ಹಾಗೂ ಚಿನ್ನಾಭರಣವನ್ನು ಖರೀದಿಸಿದ ಜಯರಾಮ ಆಚಾರ್ಯ (54) ಬಂಧಿತರು.

ಬಂಧಿತರಿಂದ ಒಟ್ಟು ಸುಮಾರು ರೂ. 5.60 ಲಕ್ಷ ಮೌಲ್ಯದ 39 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಪ್ರಿಲ್ 23ರಂದು  ಪತ್ತೊಂಜಿಕಟ್ಟೆ ನಿವಾಸಿ ಶಂಕರ ಕುಲಾಲ್ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿತ್ತು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

- Advertisement -

Latest News

error: Content is protected !!