Wednesday, June 3, 2026
Homeಕರಾವಳಿಉಡುಪಿಉಡುಪಿ:ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಉಡುಪಿ:ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಕ್ಕೆಕಟ್ಟೆ ಡಯಾನ ಟಾಕೀಸ್ ಬಳಿಯ ಕೃಷ್ಣಾಂಜನೇಯ ನಿಲಯದ ನಿವಾಸಿ ಸದಾನಂದ ಶೇರಿಗಾರ್ (53) ಮೃತ ದುರ್ದೈವಿ.

ಸದಾನಂದ ಶೇರಿಗಾರ್ ಇಂದು ಬೆಳಗ್ಗೆ ಮಾವಿನಕಾಯಿ ಕೊಯ್ಯುವ ವೇಳೆ ಅಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅವರು ಮಗಳನ್ನು ಶಾಲೆ ಬಿಟ್ಟು ಕಚೇರಿಗೆ ಬಂದಿದ್ದು ತನ್ನ ಬೈಕ್ ನ್ನು ಅದೇ ಮಾವಿನ ಮರದ ಕೆಳಗೆ ನಿಲ್ಲಿಸಿದ್ದರು.ಮಾವಿನ ಮರದಲ್ಲಿದ್ದ ಒಂದಷ್ಟು ಹಣ್ಣನ್ನು ಕೊಯ್ಯುವಂತ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!