- Advertisement -
![]()
- Advertisement -
ಪುತ್ತೂರು: ಜನಾರ್ದನ ರೆಡ್ಡಿ ಅವರು ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಅವರ ಬಿಡುಗಡೆಗಾಗಿ ಸವಣೂರಿನ ಅರೆಲ್ತಡಿಯಲ್ಲಿ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳು ದೈವದ ಮೊರೆ ಹೋಗಿದ್ದರು. ದೈವದ ನೇಮದ ಸಂದರ್ಭದಲ್ಲಿ ದೈವ “ಒಂದು ತಿಂಗಳ ಒಳಗಾಗಿ ರೆಡ್ಡಿ ಬಿಡುಗಡೆಯಾಗಲಿದ್ದಾರೆ” ಎಂದು ಅಭಯ ನೀಡಿತ್ತು.
ದೈವದ ನುಡಿಯಂತೆಯೇ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾ ಲಕ್ಷ್ಮಿ ಹಾಗೂ ಕುಟುಂಬದ ಇತರೆ ಸದಸ್ಯರ ಜೊತೆ ಸವಣೂರಿಗೆ ಆಗಮಿಸಿದ್ದು, ಗ್ರಾಮ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಂದು ರಾತ್ರಿ ನಡೆಯಲಿರುವ ಹರಕೆ ಕೋಲದಲ್ಲಿ ಜನಾರ್ದನ ರೆಡ್ಡಿ ಕುಟುಂಬಸ್ಥರು ಭಾಗವಹಿಸಲಿದ್ದಾರೆ.
- Advertisement -


