Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿ ಕಳ್ಳತನ

ಬೆಳ್ತಂಗಡಿ : ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಕನ್ಯಾಡಿ ಗ್ರಾಮದ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಎದುರಿನ ಬೀಗವನ್ನು ಮುರಿದು ಕಳ್ಳರು ದೇವರ ನಾಲ್ಕು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಘಟನೆ ಎ.22ರಂದು ವರದಿಯಾಗಿದೆ.

ಕಳ್ಳರು ಎ.22ರಂದು ರಾತ್ರಿ ಸುಮಾರು 2 ಗಂಟೆಯ ವೇಳೆಗೆ ದೇವಸ್ಥಾನದ ಎದುರಿನ ಬಾಗಿಲ ಬೀಗವನ್ನು ಯಾವುದೇ ಆಯುಧರಿಂದ ಮೀಟಿ ಮುರಿದು ಒಳನುಗ್ಗಿದ ಕಳ್ಳರು ದೇವಸ್ಥಾನದ ಒಳಗೆ ಇದ್ದ ಎರಡು ದೊಡ್ಡ ಕಾಣಿಕೆ ಡಬ್ಬಿ ಹಾಗೂ ಮೂರು ಸಣ್ಣ ಕಾಣಿಕೆ ಡಬ್ಬಿಯನ್ನು ಕಳವುಗೈದು ಪರಾರಿಯಾಗಿದ್ದಾರೆ. ಕಳ್ಳರು ದೇವಸ್ಥಾನ ಬೀಗ ಮುರಿದು ಒಳನುಗ್ಗಿ ಕಾಣಿಕೆ ಡಬ್ಬಿ ಕಳವು ಗೈದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವಾದ ಐದು ಕಾಣಿಕೆ ಡಬ್ಬಿಯಲ್ಲಿ ಭಕ್ತರು ಕಾಣಿಕೆ ಹಾಕಿದ 30 ಸಾವಿರದಷ್ಟು ಹೆಚ್ಚಿನ ಹಣ ಇತ್ತೆಂದು ಅಂದಾಜಿಸಲಾಗಿದೆ.

ನಿಡಿಗಲ್ ಶ್ರೀ ಲೋಕನಥೇಶ್ವರ ದೇವಸ್ಥಾನದ ಸಿರಿ ಜಾತ್ರೋತ್ಸವ ಇತ್ತಿಚೇಗೆ ಆದ್ದೂರಿಯಾಗಿ ಜರುಗಿತ್ತು. ಕಾಣಿಕೆ ಡಬ್ಬಿ ಕಳ್ಳತನ ಮಾಡಿದ ಬಳಿಕ ಹತ್ತಿರದ ಪ್ರದೇಶದಲ್ಲಿ ಕಳ್ಳರು ಬಿಸಾಕಿ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್, ಬೆಳ್ತಂಗಡಿ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷ ಹಾಗೂ ಸಿಬ್ಬಂದಿ, ಮಂಗಳೂರು ಶ್ವಾನ ದಳ ತಂಡ, ಬೆರಳಚ್ಚು ತಜ್ಞರ ತಂಡ, ಎಫ್ಎಸ್ಎಲ್ ವಿಭಾಗದ ಸೋಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!